ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿರುವ ಘಟನೆ ಕೆರಾಡಿಯಲ್ಲಿ ನಡೆದಿದೆ. ಕೆರಾಡಿಯ ಸುಕುಮಾರ ಶೆಟ್ಟಿ ಎಂಬವರ ಮನೆಯ ಆವರಣವಿಲ್ಲದ ಬಾವಿಗೆ ಚಿರತೆ ಬಿದ್ದಿದೆ. ಮನೆಯವರು ಈ ವಿಚಾರದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಗೆ ಹಗ್ಗ ಕಟ್ಟಿದ ಬೋನು ಬಿಟ್ಟು ಚಿರತೆ ಪ್ರವೇಶಿಸುವಂತೆ ಮಾಡಿ ಈ ಮೂಲಕ ಚಿರತೆಯನ್ನು ಮೇಲಕ್ಕೆತ್ತಿದ್ದಾರೆ.
ಮೂರೂವರೆ ವರ್ಷ ಪ್ರಾಯದ ಹೆಣ್ಣು ಚಿರತೆಯಾಗಿದೆ.
ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಉದಯ್, ಸುನೀಲ್, ಶರತ್, ದಿಲೀಪ್, ಅರಣ್ಯ ರಕ್ಷಕರಾದ ಬಸವರಾಜ್, ಹರಿಪ್ರಸಾದ್, ರಾಘವೇಂದ್ರ, ವಿಜಯ್, ರಂಜಿತ್, ಅಶೋಕ್, ಗ್ರಾಮ ಅರಣ್ಯ ಸಮಿತಿಯವರು ಹಾಗೂ ಸ್ಥಳೀಯರು ಇಲಾಖೆಯೊಂದಿಗೆ ಚಿರತೆ ರಕ್ಷಣೆ ಕಾರ್ಯಾಚರಣೆಗೆ ಭಾಗವಹಿಸಿದ್ದರು.
Advertisement. Scroll to continue reading.
In this article:Diksoochi news, Diksoochi t v, diksoochiudupi, keradi, Kundapura, leopard
Click to comment