Connect with us

Hi, what are you looking for?

Diksoochi News

ರಾಷ್ಟ್ರೀಯ

ಪ್ರಧಾನಿ ಮೋದಿ ಹತ್ಯೆಗೆ ಸಂಚು! ಎನ್ ಐ ಎ ಗೆ ಇ-ಮೇಲ್ ಬೆದರಿಕೆ

1

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಸಂಚು ರೂಪಿಸಿರುವ ಬಗ್ಗೆ ಸತ್ಯ ಬಯಲಾಗಿದೆ. ನರೇಂದ್ರ ಮೋದಿ ಅವರ ಪ್ರಾಣ ಬೆದರಿಕೆಯೊಡ್ಡಿ ಈ ಮೇಲ್ ಮೂಲಕ ಸಂದೇಶ ರವಾನೆಯಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂಬೈ ಶಾಖೆಗೆ ಇಮೇಲ್ ಬಂದಿದೆ.

ಈ ಮೇಲ್ ನಲ್ಲಿ 20 ಕೆಜಿ ಆರ್ ಡಿಎಕ್ಸ್ ಬಳಸಿ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಕೇಂದ್ರದ ತನಿಖಾ ಸಂಸ್ಥೆಗಳಿಗೆ ಈ ಮಾಹಿತಿ ಸಿಕ್ಕಿದ್ದು, ಈ ಮೇಲ್ ನ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ.

ಈ ಷಡ್ಯಂತ್ರವನ್ನು ಬಯಲಿಗೆಳೆಯಬಾರದು ಎಂದು ಆತ್ಮಹತ್ಯೆಗೆ ಸಿದ್ಧರಾಗಿದ್ದಾರೆ ಎಂದು ಇ-ಮೇಲರ್ ಹೇಳಿದ್ದಾರೆ. 

Advertisement. Scroll to continue reading.

ಇಮೇಲ್ ಪ್ರಕಾರ, ಯೋಜನೆಯನ್ನು ರೂಪಿಸಲಾಗಿದೆ ಮತ್ತು ಕಾರ್ಯಗತಗೊಳಿಸಲು ಕಾಯುತ್ತಿದೆ. ಈ ಯೋಜನೆಗೆ ವಿವಿಧ ಭಯೋತ್ಪಾದಕ ಸಂಘಟನೆಗಳೂ ಸಂಪರ್ಕ ಹೊಂದಿವೆ.

ಈ ಇಮೇಲ್ ಅನ್ನು ಬೇರೆ ಬೇರೆ ಏಜೆನ್ಸಿಗಳೊಂದಿಗೆ ಹಂಚಿಕೊಂಡಿರುವುದಾಗಿ ಎನ್‌ಐಎ ಮಾಹಿತಿ ನೀಡಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!