ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸಕ್ಕರೆ ಕಾರ್ಖಾನೆಯನ್ನು ಪುನರ್ ನಿರ್ಮಾಣ ಮಾಡಿ ಸಕ್ಕರೆ ಮತ್ತು ಇಥೆನಾಲ್ ಘಟಕದ ಪ್ರಾರಂಭಕ್ಕೆ ಆರ್ಥಿಕ ನೆರವು ನೀಡಬೇಕೆಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ. ಮುರುಗೇಶ್ ನಿರಾಣಿ ಅವರಲ್ಲಿ ಮನವಿ ಮಾಡಿಕೊಂಡರು.
ವಾರಾಹಿ ನೀರಾವರಿ ಯೋಜನೆ ಮತ್ತು ಇನ್ನಿತರ ಸೌಲಭ್ಯಗಳನ್ನು ಕ್ರೋಢೀಕರಿಸಿಕೊಂಡು ಹತ್ತು ಸಾವಿರ ಎಕರೆಗೂ ಮಿಕ್ಕಿ ಕಬ್ಬನ್ನು ಬೆಳೆಯುವ ವ್ಯವಸ್ಥೆಯನ್ನ ಕಾರ್ಖಾನೆಯ ನೇತೃತ್ವದಲಿೢ ಮಾಡಲಾಗುವುದು ಎಂದು ಸುಪ್ರಸಾದ್ ಶೆಟ್ಟಿ ಯವರು ಭರವಸೆಯನ್ನು ನೀಡಿದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರಾದ ಮುರುಗೇಶ್ ನಿರಾಣಿ, ಇಥೆನಾಲ್ ಉತ್ಪಾದನಾ ಘಟಕಕ್ಕೆ ನೂತನ ಪಾಲಿಸಿ ಯ ಪ್ರಕಾರ ಪೂರ್ಣ ಪ್ರಮಾಣದ ಸಾಲದ ನೆರವನ್ನು ನೀಡಿ ಕಾರ್ಖಾನೆಯನ್ನು ಪುನರ್ ನಿರ್ಮಾಣಗೊಳಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ , ಚೇಂಬರ್ ಆಫ್ ಕಾಮರ್ಸ್ ಉಡುಪಿಯ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.