Connect with us

Hi, what are you looking for?

Diksoochi News

ರಾಷ್ಟ್ರೀಯ

ಹೆಣ್ಣು ಮಗು ಹುಟ್ಟಿದ ಸಂಭ್ರಮ; ಹೆಲಿಕಾಪ್ಟರ್ ನಲ್ಲಿ ಮನೆಗೆ ಮಗಳ ಕರೆತಂದ ತಂದೆ!

1

ಮಹಾರಾಷ್ಟ್ರ: ಮನೆಗೆ ಮಗುವಿನ ಆಗಮನ ಹೊಸ ಸಂಭ್ರಮವನ್ನು ಹೊತ್ತು ತರುತ್ತದೆ. ಮನೆಯಲ್ಲಿ ಸಂತಸ…ಸಡಗರ…ಆದರೆ, ಇಲ್ಲೊಂದು ಕುಟುಂಬ ಮಾತ್ರ ಮಗು ಹುಟ್ಟಿದ ಸಂಭ್ರಮವನ್ನು ವಿಭಿನ್ನವಾಗಿಸಿದೆ. ಅದೂ ತಮ್ಮ ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನವಾಗಿದೆ ಎಂಬುದನ್ನು ಈ ಕುಟುಂಬ ಭಿನ್ನವಾಗಿ ಆಚರಿಸಿದೆ. ಹೌದು, ಮಗುವಿನ ತಂದೆ ಮಗುವನ್ನು ಹೆಲಿಕಾಪ್ಟರ್ ಮೂಲಕ ಮನೆಗೆ ಕರೆ ತಂದಿದ್ದಾರೆ.

ರಾಜಲಕ್ಷ್ಮಿ ಎಂಬ ಹೆಣ್ಣು ಮಗು ಜನವರಿ 22 ರಂದು ಭೋಸಾರಿಯಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಜನಿಸಿದಳು.

ಮಗುವನ್ನು ಖೇಡ್‌ನ ಶೆಲ್ಗಾಂವ್‌ನಲ್ಲಿರುವ ತನ್ನ ಮನೆಗೆ ಕರೆದೊಯ್ಯಲು ಕುಟುಂಬವು ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ತೆಗೆದುಕೊಂಡು, ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿಸುವ ಮೂಲಕ ಮನೆಗೆ ಕರೆತಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Advertisement. Scroll to continue reading.
ನಮ್ಮ ಇಡೀ ಕುಟುಂಬದಲ್ಲಿ ನಮಗೆ ಹೆಣ್ಣು ಮಗು ಇರಲಿಲ್ಲ. ಆದ್ದರಿಂದ, ನಮ್ಮ ಮಗಳ ಮನೆಗೆ ಬರುವುದನ್ನು ವಿಶೇಷವಾಗಿಸಲು, ನಾವು 1 ಲಕ್ಷ ರೂಪಾಯಿ ಮೌಲ್ಯದ ಚಾಪರ್ ರೈಡ್ ಅನ್ನು ಏರ್ಪಡಿಸಿದ್ದೇವೆ: ವಿಶಾಲ್ ಜರೇಕರ್, ತಂದೆ

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!