ಮಣಿಪಾಲ: ಒಂದು ತಿಂಗಳ ಹಿಂದೆ ಗೋ ಕಳ್ಳರ ಅಟ್ಟಹಾಸಕ್ಕೆ ಸಿಲುಕಿ ಸಾವಿನ ದವಡೆಯಿಂದ ಪಾರಾದ ಹೋರಿಯ ಕಾಲಿನಲ್ಲಿ ಸಿಲುಕಿದ್ದ ಹಗ್ಗ ಬಿಗಿದು ತೀವ್ರ ಗಾಯವಾಗಿ ಮಣಿಪಾಲ ಅಸು ಪಾಸಿನಲ್ಲಿ ತಿರುಗುತ್ತಿತ್ತು.
ಸ್ಥಳೀಯರು ಹಿಡಿದು ಚಿಕಿತ್ಸೆ ಕೊಡಲು ಪ್ರಯತ್ನಿಸಿದ್ದರೂ ಬಲಿಷ್ಠ ಹೋರಿಯನ್ನು ಹಿಡಿಯುವುದು ಸುಲಭದ ಕೆಲಸವಾಗಿರಲಿಲ್ಲ. ವೈದ್ಯರಿಂದ ಅರಿವಳಿಕೆ ಮದ್ದು ನೀಡಿ ಹಿಡಿಯುವುದು ಒಂದೇ ಮಾರ್ಗವಿತ್ತು. ದುರಾದೃಷ್ಟವಶಾತ್ ಉಡುಪಿಯಲ್ಲಿ ಆ ವ್ಯವಸ್ಥೆ ಇಲ್ಲವಾಗಿ ಪಾಪ ಮೂಕ ಪ್ರಾಣಿ ಕಷ್ಟ ಅನುಭವಿಸಿತ್ತು. ಆದರೆ, ಹಠ ಬಿಡದ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಇಂದು ಸಮಯೋಚಿತ ಕಾರ್ಯದಿಂದ ಹೋರಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು. ಬಳಿಕ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಮಣಿಪಾಲ ಪಶು ವೈದ್ಯ ಪ್ರಶಾಂತ್ ಶೆಟ್ಟಿ, ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರಾದ ನಿತ್ಯಾನಂದ, ಪ್ರಾಣೇಶ್ ಪರ್ಕಳ, ಪವನ್ ಪರ್ಕಳ, ಶೈಲೆಂದ್ರ, ನಿಕಿಲ್ ಮಡಿವಾಳ್, ರವೀಶ್, ನಿತೀನ್ ಪೈ ಸಹಕರಿಸಿದರು.
ಇದು ಒಂದು ತಿಂಗಳಲ್ಲಿ ಮೂರನೇ ಪ್ರಕರಣ ಎಂದು ತಿಳಿದು ಬಂದಿದೆ.