ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಆಂಧ್ರಪ್ರದೇಶದ ನಲ್ಲೂರಿನ ಇಪ್ಪತ್ತಾರು ವರ್ಷದ ಯುವಕ ಕಾರ್ತಿಕ್ ಬೈಕಿನಲ್ಲಿ ಏಕಾಂಗಿಯಾಗಿ ದೇಶ ಪರ್ಯಟನೆ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟಿದ್ದು, ಆತನಿಗೆ ಹೆಬ್ರಿಯಲ್ಲಿ ಸಾರ್ವಜನಿಕರಿಂದ ಮಂಗಳವಾರ ಹೆಬ್ರಿ ಪೇಟೆಯಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.
ಒಟ್ಟು 400 ದಿನದ ಬೈಕ್ ರೈಡಿಂಗ್ ಇದಾಗಿದ್ದು, ಆಂಧ್ರಪ್ರದೇಶದ ನೆಲ್ಲೂರಿನಿಂದ ಹೊರಟು ಮಂಗಳವಾರ ಹೆಬ್ರಿ ಮೂಲಕ ಮುಂದಿನ ಪ್ರಯಾಣ ಬೆಳೆಸಿದ್ದಾರೆ.
ಈ 400 ದಿನದ ಬೈಕ್ ರೈಡ್ ಜರ್ನಿ ಮುಗಿಸಿದರೆ ಇದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರುತ್ತದೆ ಎಂದು ಯುವಕ ಕಾರ್ತಿಕ್ ತಿಳಿಸಿದ್ದಾನೆ.
ರಾಯಲ್ ಎನ್ ಫೀಲ್ಡ್ ಹಿಮಾಲಯನ್ ಬೈಕ್ ನಲ್ಲಿ ಪ್ರತಿನಿತ್ಯ 400ಕಿಲೋ ಮೀಟರ್ ಪ್ರಯಾಣ.
ಇವರ ಮುಖ್ಯ ಉದ್ದೇಶ ಇಂದಿನ ಯುವ ಸಮುದಾಯ ಸಣ್ಣಪುಟ್ಟ ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಾರೆ ಇದನ್ನು ತಪ್ಪಿಸಲು ಯುವಕರು ಮನೆಯಿಂದ ಹೊರಗೆ ಬನ್ನಿ. ದೇಶ ಸುತ್ತಿ ಹಳ್ಳಿಗಳಿಗೆ ಹೋಗಿ ಜನರೊಂದಿಗೆ ಮಾತನಾಡಿ. ಪ್ರಕೃತಿಯನ್ನು ಸವಿಯಿರಿ. ನಿಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಿ. ಸಮಸ್ಯೆಗಳ ಪರಿಹಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ. ಇದು ಇವರ ಬೈಕ್ ರೇಡ್ ನ ಮುಖ್ಯ ಉದ್ದೇಶ ಆಗಿರುತ್ತದೆ ಎಂದು ತಿಳಿಸಿದ್ದಾರೆ.
ಹೆಬ್ರಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕರುಣಾಕರ ರಾವ್ ಇಂದಿರಾನಗರ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಇದರ ಜಿಲ್ಲಾ ಸಂಚಾಲಕ ಕರವೇ ಮುಖಂಡ ಸೀತಾನದಿ ವಿಜೇಂದ್ರ ಶೆಟ್ಟಿ, ರಿಕ್ಷಾ ಮಾಲಕ, ಚಾಲಕರು ಮತ್ತು ಸಾರ್ವಜನಿಕರು ಯುವಕ ಕಾರ್ತಿಕ್ ಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.