ವರದಿ : ಬಿ.ಎಸ್.ಆಚಾರ್ಯ
ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜಸೇವಕ ಕಾಪು ಲೀಲಾದರ ಶೆಟ್ಟಿ ಯವರು ನೆರವೇರಿಸಿದರು.
ಕೊಲ್ಲೂರು : ಜನತಾ ಜಲಧಾರೆ ಜಲಯಾತ್ರೆಗೆ ಕೊಲ್ಲೂರು ಗಣಪತಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಸೌಪರ್ಣಿಕಾ ನದಿಗೆ ಪೂಜೆಯನ್ನು ಸಲ್ಲಿಸಿ ಸುಮಂಗಲೆಯರು ಸೇರಿ, ಜಿಲ್ಲಾಧ್ಯಕ್ಷ ಯೋಗೀಶ್ ವಿ.ಶೆಟ್ಟಿ ರಥಯಾತ್ರೆಯ ಮುಖ್ಯ ಕಲಶಕ್ಕೆ ವಿದ್ಯುಕ್ತವಾಗಿ ಸೌಪರ್ಣಿಕ ನದಿ ನೀರನ್ನು ಶೇಖರಿಸುವ ಮೂಲಕ ಚಾಲನೆ ನೀಡಿದರು
ನಂತರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ರಥಯಾತ್ರೆಯ ವಾಹನಕ್ಕೆ ಪೂಜೆ ನೆರವೇರಿಸಲಾಯಿತು.
ಯೋಗೀಶ್ ವಿ. ಶೆಟ್ಟಿ ಮಾತನಾಡಿ, ರಥಯಾತ್ರೆಯು ಮುಂದುವರಿದು ಉಡುಪಿ ಜಿಲ್ಲೆಯ, ವಾರಾಹಿ ಸೀತಾನದಿ, ಸ್ವರ್ಣ ನದಿಗಳ ನೀರನ್ನು ಕಲಶಕ್ಕೆ ಶೇಖರಣೆ ಮಾಡುವುದಾಗಿ, ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ಜಲ ಸಂರಕ್ಷಣೆ, ಕುಡಿಯುವ ನೀರು ಒದಗಿಸುವ ಮೂಲ ಉದ್ದೇಶದಿಂದ ರಥಯಾತ್ರೆಯನ್ನು ಮಾಜಿ ಪ್ರಧಾನ ಮಂತ್ರಿ ಎಚ್. ಡಿ. ದೇವೇಗೌಡ, ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಆಶಯದಂತೆ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭ ಕಾರ್ಯಧ್ಯಕ್ಷ ವಾಸುದೇವರಾವ್, ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಅಡಿಗ, ಜಯರಾಮ ಆಚಾರ್ಯ, ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾದೇಗೌಡ, ಜಯಕುಮಾರ ಪರ್ಕಳ, ಗಂಗಾಧರ
ಬಿರ್ತಿ, ದಕ್ಷಿತ್ ಶೆಟ್ಟಿ, ಸಂದೇಶ್ ಭಟ್, ಶಾಲಿನಿ ಬಿ.ಶೆಟ್ಟಿ ಕೆಂಚನೂರು , ಮನ್ಸೂರ್ ಇಬ್ರಾಹಿಂ ಕಿಶೋರ್ ಬಳ್ಳಾಲ್, ಬಾಲಕೃಷ್ಣ ಆಚಾರ್ಯ, ಶ್ರೀಕಾಂತ್ ಹೆಬ್ರಿ, ನಿತಿನ್ ಶೆಟ್ಟಿ, ಜಯಶೀಲ ಶೆಟ್ಟಿ, ಪೂರ್ಣಿಮಾ ನಾಯಕ್, ಆರ್ . ಆರ್. ಪುತ್ರನ್, ಹುಸೇನ್ ಹೈಕಾಡಿ, ರಕ್ಷಿತ್ ಸುವರ್ಣ, ಸಂಜಯ್ ಕುಮಾರ್, ರತ್ನಾಕರ್,ಸುಮತಿ ಹೆಗ್ಗಡೆ ಉಮೇಶ್ ಕರ್ಕೇರ, ಸತೀಶ್ ಪೂಜಾರಿ ಕರ್ಕೇರ, ದೇವರಾಜ್ ತೊಟ್ಟಂ, ವಿಲ್ಫ್ರೆಡ್ ಓಸ್ವಲ್ಡ್ ಡಿಮೆಲ್ಲೊ, ಅಕ್ರಮ್ ಮಾವಡ, ಅಬ್ದುಲ್ ರಜಾಕ್ ಉಚ್ಚಿಲ, ಇಬ್ರಾಹಿಂ ತವಕ್ಕಲ್, ಶರತ್ ಗೌಡ, ಶಂಸುದ್ದೀನ್ ಮಜೂರು, ಬಾಲಚಂದ್ರ, ವಸುಮತಿ, ಪಕ್ಷ ನಾಯಕರು ಕಾರ್ಯಕರ್ತರು, ಸಾರ್ವಜನಿಕರು ರಥಯಾತ್ರೆಯಲ್ಲಿ ಭಾಗವಹಿಸಿದ್ದರು.