ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೇಂದ್ರ ಸರ್ಕಾರವು ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯು ವಾಹನ ಮಾಲಕರು ಹಾಗೂ ಚಾಲಕರ ಬದುಕಿನ ಮೇಲೆ ವಿಪರೀತ ದುಷ್ಪರಿಣಾಮ ಬೀರಿದೆ.
ನಿರಂತರ ಬೆಲೆ ಏರಿಕೆಯಿಂದ ಚಾಲಕರು ಆದಾಯ ಕಳೆದು ಕೊಂಡು ಕುಟುಂಬ ನಿರ್ವಹಿಸಲು ಪರದಾಡುತ್ತಿದ್ದಾರೆ. ಸರ್ಕಾರದ ನೀತಿಯ ವಿರುದ್ಧ ಆಲ್ ಇಂಡಿಯಾ ರೋಡ್ ಟ್ರಾನ್ಸ್ ಪೋರ್ಟ್ ವರ್ಕರ್ಸ್ ಫೆಡರೇಶನ್ ಸಂಘಟನೆಯು ಎಪ್ರಿಲ್ 20 ರಂದು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
Advertisement. Scroll to continue reading.
ಕುಂದಾಪುರದಲ್ಲಿ ಚಾಲಕರ ಸಂಘಟನೆ ಅಂದು ಬೆಳಿಗ್ಗೆ 10 ಗಂಟೆಗೆ ಕುಂದಾಪುರ ಶಾಸ್ತ್ರಿ ವ್ರತ್ತದಲ್ಲಿ ಬ್ರಹತ್ ಪ್ರತಿಭಟನೆ ನಡೆಸುತ್ತಿದೆ ಎಂದು ಕುಂದಾಪುರ ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು) ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ ತಿಳಿಸಿದ್ದಾರೆ.