ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕೋವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷದಿಂದ ನಡೆಯದ ಬ್ರಹ್ಮಾವರ ಶ್ರೀ ಮಹಾತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ಭಾನುವಾರದಿಂದ ನಾನಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಶುಕ್ರವಾರ ರಥೋತ್ಸವ ಜರುಗಲಿದ್ದು, ಊರ ಜನರ ಹಸಿರು ಹೊರೆಕಾಣಿಕೆ ಸೋಮವಾರ ಜರುಗಿತು.
ಇಲ್ಲಿನ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರ ಮಾಲಕರ ಸಂಘದ ಅಧ್ಯಕ್ಷ ರಮೇಶ್ ನಾಯಕ್ ನೇತೃತ್ವದಲ್ಲಿ ಸದಸ್ಯರ ಸಹಕಾರದಿಂದ ಈ ವರ್ಷ ಸಾರ್ವಜನಿಕರಿಂದ ಹೊರೆ ಕಾಣಿಕೆ ಮತ್ತು ಸಂಘದ ವತಿಯಿಂದ ಕೂಡಾ ಗರಿಷ್ಠ ಮಟ್ಟದಲ್ಲಿ ಸಂಗ್ರಹಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಚಾಂತಾರು ರಸ್ತೆಯಿಂದ ಹೊರಟ ಹಸಿರು ಹೊರೆಕಾಣಿಕೆ ಚಂಡೆ ಮತ್ತು ನಾನಾ ಟ್ಯಾಬ್ಲೋಗಳು ಮೆರವಣಿಗೆಯಲ್ಲಿದ್ದು, ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯಿಂದ ಆಕಾಶವಾಣಿ ವೃತ್ತದಿಂದ ರಥ ಬೀದಿ ಮೂಲಕ ದೇವಸ್ಥಾನಕ್ಕೆ ಸಮರ್ಪಿಸಲಾಯಿತು.
ಆಡಳಿತಾಧಿಕಾರಿ ಲಕ್ಷ್ಮೀನಾರಾಯಣ ಭಟ್ ನೇತೃತ್ವ ವಹಿಸಿದ್ದರು. ಮಾಗಣೆಯ ಮತ್ತು ಎಂಟು ಗ್ರಾಮದವರು ಮತ್ತು ಸಾರ್ವಜನಿಕ ಭಕ್ತಾಧಿಗಳು ಭಾಗವಹಿಸಿದ್ದರು.