ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಇಂದು ಸಿಎಂ ನೇತೃತ್ವದಲ್ಲಿ ಕೊರೋನಾ ನಾಲ್ಕನೇ ಅಲೆ ಕುರಿತು ಮಹತ್ವದ ನಡೆದಿದ್ದು, ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಬಳಿಕ ಸಚಿವ ಸುಧಾಕರ್ ಅವರು ಮಾಧ್ಯಮಗಳಿಗೊಂದಿಗೆ ಮಾತನಾಡಿ, ಲಸಿಕೆ ಅಭಿಯಾನಕ್ಕೆ ಒತ್ತು ನೀಡಲಾಗುವುದು, ಇದಲ್ಲದೇ ಸೋಂಕು ಹೆಚ್ಚು ಇರುವ ದೇಶದಿಂದ ಬರೋರ ಮೇಲೆ ನಿಗಾ ಇಡಲಾಗುವುದು, ಇನ್ನೂ ಕರೋನ ಸೋಂಕಿನ ಬಗ್ಗೆ ಶೀಘ್ರದಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು.
Advertisement. Scroll to continue reading.
ಬೆಂಗಳೂರಿನಲ್ಲಿ ಕೊರೋನಾ ಹೆಚ್ಚುತ್ತಿದ್ದು, 1.9 ಪಾಸಿಟಿವಿಟಿ ರೇಟ್ ಇದೆ. ಕೊರೋನಾ ಸೋಂಕು ಹೆಚ್ಚಾಗಿರುವ ದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗುತ್ತದೆ. ಏರ್ ಪೋರ್ಟ್ ಗಳಲ್ಲಿ ತೀವ್ರ ನಿಗಾ ವಹಿಸಲಾಗುವುದು. ಕೊರೋನಾ ನಾಲ್ಕನೇ ಅಲೆ ಬರುವ ವರೆಗೆ ಕಾಯಬೇಡಿ. ಲಸಿಕೆ ಎರಡನೇ ಡೋಸ್, ಬೂಸ್ಟರ್ ಡೋಸ್ ತೆಗೆದುಕೊಳ್ಳಿ ಎಂದರು.