Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಯಾತ್ರಾರ್ಥಿಯೊಬ್ಬರ ಲಕ್ಷಾಂತರ ರೂಪೈ ಮೌಲ್ಯದ ಸೊತ್ತು ಕಳ್ಳತನ

1

ಉಡುಪಿ: ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಯಾತ್ರಾರ್ಥಿಯೊಬ್ಬರ ಲಕ್ಷಾಂತರ ರೂಪೈನ ಸೊತ್ತು ಕಳವುಗೈದಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದಿಂದ ಶಾಂತಾ ಜಿ ಕುಂದರ್‌ ಸೋಮವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದು ದೇವರ ದರ್ಶನ ಪಡೆದು ಊಟ ಮಾಡಿ ತೆರೆಳಿದ್ದಾರೆ. ಈ ನಡುವೆ ಬೆಳಿಗ್ಗೆ 11:15 ಗಂಟೆಯಿಂದ 1:10 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಅವರ ಬ್ಯಾಗ್‌ನ್ನು ಕತ್ತರಿಸಿ, ಅದರಲ್ಲಿದ್ದ ಪರ್ಸ್‌ ನ್ನು ಕಳವು ಮಾಡಿದ್ದಾರೆ.

ಪರ್ಸ್‌ನಲ್ಲಿ 1,40,000/- ರೂ. ಮೌಲ್ಯದ 30 ಗ್ರಾಂ ತೂಕದ ಹವಳದ ಸರ, ಆಧಾರ್‌ಕಾರ್ಡ್‌, ಪಾನ್‌ಕಾರ್ಡ್‌, ಸ್ವೈಪ್‌ ಕಾರ್ಡ್‌ ಹಾಗೂ ರೂಪಾಯಿ 4,000- ನಗದು ಇದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 1,44,000 ಎನ್ನಲಾಗಿದೆ .

Advertisement. Scroll to continue reading.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!