ಚಿತ್ರದುರ್ಗ : ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಿಭಿನ್ನವಾದ ಬರಹಗಳ ಮುದ್ರಣ ಇತ್ತೀಚಿಗಿನ ಟ್ರೆಂಡ್ ಆಗಿದೆ. ಆದರೆ, ಉಡುಗೊರೆ ವಿಚಾರಕ್ಕೆ ಬಂದರೆ ಸಾಮಾನ್ಯವಾಗಿ ‘ ಆಶೀರ್ವಾದವೇ ಉಡುಗೊರೆ’, ‘ನಿಮ್ಮ ಸುಖಾಗಮನವೇ ಉಡುಗೊರೆ’ ಎಂದು ಬರೆಯಲಾಗುತ್ತದೆ.
ಆದರೆ, ಇಲ್ಲೊಂದು ಕುಟುಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಅಪ್ಪಟ ಅಭಿಮಾನಿಯಾಗಿದೆ. ಹಾಗಾಗಿ, “ಮದುವೆಗೆ ಬರೋರು ಉಡುಗೋರೆ ಏನ್ ಬೇಡ. 2023ರ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಮತ ಹಾಕಿದ್ರೇ.. ಅದೇ ನೀವು ನೀಡೋ ಉಡುಗೊರೆ” ಎಂಬುದಾಗಿ ಬರೆದು ಅಭಿಮಾನ ಮೆರೆದಿದ್ದಾರೆ.
ತುಮಕೂರು ಜಿಲ್ಲೆಯ ಕುಣಗಲ್ ರಸ್ತೆಯಲ್ಲಿನ ಜಯನಗರದ ಕರಮ್ಮ ಮತ್ತು ದಿ.ಸಿದ್ಧಪ್ಪ ಹಾಗೂ ಶ್ರೀಮತಿ ಪುಟ್ಟಮ್ಮ ಮತ್ತು ದಿ.ನಾಗರಾಜಪ್ಪ ಅವರ ಕುಟುಂಬಸ್ಥರಿಗೆ ಜೆಡಿಎಸ್ ಪ್ರೇಮ ಎಷ್ಟರ ಪ್ರಮಾಣದಲ್ಲಿದೆ ಎಂಬುದನ್ನು ತೋರಿಸಿದ್ದಾರೆ.
ಈ ಕಾರಣದಿಂದಾಗಿಯೇ, ಆಮಂತ್ರಣ ಪತ್ರಿಕೆಯಲ್ಲಿ ಶ್ರೀಮತಿ ಚೆನ್ನಮ್ಮ, ಹೆಚ್ ಡಿ ದೇವೇಗೌಡರು, ಅನಿತಾ ಹೆಚ್ ಡಿ ಕುಮಾರಸ್ವಾಮಿಯವರ ಕೃಪಾಶೀರ್ವಾದಗಳೊಂದಿಗೆ ಎಂದೂ ಬರೆಸಿದ್ದಾರೆ.
ಪುಟ್ಟಮ್ಮ ಮತ್ತು ದಿ.ನಾಗರಾಜಪ್ಪನವರ ದ್ವಿತೀಯ ಪುತ್ರ ಎನ್ ಜಯಕುಮಾರ್, ಕದರಮ್ಮ ಮತ್ತು ದಿ.ಸಿದ್ಧಪ್ಪನವರ ಏಕೈಕ ಪುತ್ರಿ ಜ್ಯೋತಿಲಕ್ಷ್ಮೀಯವರ ಮದುವೆ ಆಮಂತ್ರಣ ಪತ್ರಿಕೆ ಇದಾಗಿದೆ.
2023ರ ಚುನಾವಣೆಯಲ್ಲಿ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ನೀಡುವ ಮತವೇ ನೀವು ನೀಡುವ ಉಡುಗೊರೆ ಎಂಬುದಾಗಿ ಹಾಕಿಸಿದ್ದಾರೆ.
ಇದೀಗ ಈ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.