Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಕಾಂಗ್ರೆಸ್ ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ : ಮಾಜಿ ಶಾಸಕ ಯು. ಆರ್. ಸಭಾಪತಿ.

2

ಉಡುಪಿ : ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಒಂದು ರಾಷ್ಟೀಯ ಪಕ್ಷ ವಾಗಿದ್ದು, ಪಕ್ಷಕ್ಕೆ ಯಾರೂ ಅನಿವಾರ್ಯವಲ್ಲ ಎಂದು ಮಾಜಿ ಶಾಸಕ ಯು. ಆರ್. ಸಭಾಪತಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರವರಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ದಲ್ಲಿದ್ದಾಗ ಪ್ರಥಮ ಬಾರಿಗೆ ಸಚಿವ ಸ್ಥಾನ ನೀಡಿತ್ತು. ಪಕ್ಷದ ಸಂಕಷ್ಟದ ಕಾಲದಲ್ಲಿ ಪಕ್ಷ ಸಂಘಟನೆಯ ಯಾವುದೇ ಕಾರ್ಯಕ್ಕೆ ತನ್ನನ್ನು ತೊಡಗಿಸಿಕೊಳ್ಳದೆ ಕೊರೋನಾ ಸಂಕಷ್ಟ ಪರಿಸ್ಥಿತಿಯಲ್ಲೂ ಜನಸೇವೆ ಮಾಡದೇ ಮನೆಯಲ್ಲೇ ರಾಜಕೀಯ ಮಾಡುತ್ತಿದ್ದರು. ಇನ್ನು ಮುಂದೆ ನಿಸ್ಸಂದೇಹವಾಗಿ ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು ಬಲಾಢ್ಯವಾಗಿ ಕಟ್ಟುವುದಕ್ಕೆ ತಾನು ಶ್ರಮಿಸುವುದಾಗಿ ಸಭಾಪತಿ ಹೇಳಿದ್ದಾರೆ.

ಅಧಿಕಾರದ ಆಸೆಯಿಂದ ಬಿಜೆಪಿ ಅವರನ್ನು ಸೇರ್ಪಡೆ ಗೊಳಿಸಿದರೆ ಬಿಜೆಪಿಗೂ ನಾಳೆ ದ್ರೋಹ ಬಗೆಯುವುದು ಸರ್ವ ವಿಧಿತ ಎಂದು ಅವರು ಬಿಜೆಪಿ ನಾಯಕರನ್ನು ಎಚ್ಚರಿಸಿದ್ದಾರೆ. ಹಿಂದೆ ಅವರ ತಾಯಿ ಮನೋರಮಾ ಮಧ್ವರಾಜ್ ರವರು ಸಾಕಷ್ಟು ಬಾರಿ ಕಾಂಗ್ರೆಸ್ ಸರಕಾರ ದಲ್ಲಿ ಮಂತ್ರಿ ಯಾಗಿದ್ದು, ಕೊನೆ ಗಳಿಗೆಯಲ್ಲಿ ಬಿಜೆಪಿ ಸಂಸದೆ ಯಾಗಿ ಬಿಜೆಪಿಗೆ ಏನು ಮಾಡಿದರೆಂದು ಬಿಜೆಪಿ ನಾಯಕರು ಯೋಚಿಸಬೇಕಾಗಿದೆ? ಎಂದು ಪ್ರಶ್ನಿಸಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!