ಅಲಿರಾಜ್ಪುರ : ವಾಹನವೊಂದು ಹರಿದು ಅಪ್ರಾಪ್ತ ಬಾಲಕಿಯ ಸಾವಿಗೆ ಕಾರಣವಾದ ಹಿನ್ನೆಲೆ ಆಕ್ರೋಶಗೊಂಡ ಗುಂಪೊಂದು ಆ ವಾಹನಕ್ಕೆ ಬೆಂಕಿ ಹಚ್ಚಿ ಅದರ ಚಾಲಕನನ್ನು ಬೆಂಕಿಗೆ ಎಸೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ನಡೆದಿದೆ.
ಆರು ವರ್ಷದ ಬಾಲಕಿ ಮೇಲೆ ಪಿಕ್-ಅಪ್ ವಾಹನವೊಂದು ಹರಿದಿತ್ತು. ಪರಿಣಾಮ ಬಾಲಕಿ ಸಾವನ್ನಪ್ಪಿದ್ದಳು. ಇದರಿಂದ ಆಕ್ರೋಶಗೊಂಡ ಗುಂಪೊಂದು ವಾಹನಕ್ಕೆ ಬೆಂಕಿ ಹಚ್ಚಿದೆ. ಬಳಿಕ 43 ವರ್ಷದ ಚಾಲಕನನ್ನು ಥಳಿಸಿ ಬೆಂಕಿಗೆ ಎಸೆದಿದ್ದರು. ಇದರಿಂದಾಗಿ ತೀವ್ರ ಸುಟ್ಟ ಗಾಯಗೊಂಡ ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯು ವೈರಲ್ ಆಗಿದೆ. ವೀಡಿಯೋ ಆಧರಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗೂ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
Advertisement. Scroll to continue reading.
In this article:Alirajpur, Diksoochi news, Diksoochi t v, diksoochi udupi, madhyapradesh
Click to comment