ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಹೆಬ್ರಿ ಕನ್ನಡ ಸಾಹಿತ್ಯ ಸಮ್ಮೇಳನ ದೇವರಾಯರ ಸಾರಥ್ಯದಲ್ಲಿ ಯಶಸ್ವಿಯಾಗಿ ಸಂಪನ್ನಗೊಳ್ಳುತ್ತದೆ ಎಂದು ಖಚಿತವಾದ ಮೇಲೆ ಗೊಂದಲ ಮೂಡಿಸಲು ಕೆಲವು ಬ್ರಹ್ಮರಕ್ಕಸರು ಕಾಟಕೊಟ್ಟಿರುವುದನ್ನು ಕೇಳಿ ನನಗೆ ಅತ್ಯಂತ ನೋವಾಗಿದೆ. ದೇವರಾಯರ ಸಾಹಿತ್ಯ ಸೇವೆಯೂ ಎಂದಿಗೂ ನಿರಂತರವಾಗಿ ನಡೆಯುತ್ತದೆ.
ಸಾಹಿತ್ಯ ಯಾರ ಗುತ್ತಿಗೆಯೂ ಅಲ್ಲ, ಮನೆಮನದಂಗಳಕ್ಕೆ ಸಾಹಿತ್ಯ ಬರಬೇಕು, ಸಾಹಿತ್ಯ ಸಮ್ಮೇಳನಗಳು ಜ್ಞಾನದ ಯಜ್ಞ, ಹೆಬ್ರಿಯಲ್ಲಿ ಸಾಹಿತ್ಯದ ಸೌರಭವೇ ಆಗಿದೆ, ಸಮ್ಮೇಳನದಲ್ಲಿ ದೋಷ ಹುಡುಕುವ ಬದಲು ಕನ್ನಡದ ಸೇವೆ, ಸಮ್ಮೇಳನ ಮಾಡಿ ತೋರಿಸಬೇಕಿದೆ, ಸಾಹಿತಿಗಳು, ಸಾಹಿತ್ಯ ಸಂಘಟಕರು ಅಸೂಯೆ ಪಡಬಾರದು. ಹೊಟ್ಟೆಕಿಚ್ಚು ಇರಬಾರದು, ಇದೀಗ ಸಾಹಿತ್ಯ ಕ್ಷೇತ್ರ ರಾಜಕೀಯಕ್ಕಿಂತಲೂ ಅಪಾಯದ ಹಂತಕ್ಕೆ ಕೆಲವರಿಂದ ತಲುಪಿರುವುದು ನಮ್ಮ ನಡುವಿನ ಬಹುದೊಡ್ಡ ದುರಂತ ಎಂದು ಹಿರಿಯ ಸಾಹಿತಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಮಾಜಿ ಅಧ್ಯಕ್ಷ ಅಂಬಾತನಯ ಮುದ್ರಾಡಿ ಬೇಸರ ವ್ಯಕ್ತಪಡಿಸಿದರು.
ಅವರು ಹೆಬ್ರಿ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಭಾನುವಾರ ಕಾರ್ಕಳ ಹೊಸಸಂಜೆ ಪ್ರಕಾಶನ ಆಯೋಜನೆಯಲ್ಲಿ ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ನಡೆದ ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ – ಸೌರಭ ೨೦೨೨ರ ಸಮಾರೋಪ ಸಂಭ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು.
ಸಾಹಿತ್ಯ ಕ್ಷೇತ್ರವನ್ನು ಯಾರೂ ಗುತ್ತಿಗೆಗೆ ಪಡೆದುಕೊಂಡಿಲ್ಲ. ಕನ್ನಡದ ಸೇವೆಯನ್ನು ಯಾರೂ ಕೂಡ ಮಾಡಹುದು. ಸಾಹಿತ್ಯ ಮನ ಮನೆಯಂಗಳಕ್ಕೆ ಬರಬೇಕಿದೆ, ಅಂತಹ ಮಹತ್ವದ ಕಾರ್ಯವನ್ನು ದೇವರಾಯ ಪ್ರಭು ನಿಸ್ವಾರ್ಥವಾಗಿ ಕನ್ನಡಮ್ಮನ ಸೇವೆ ಮಾಡಿದ್ದಾರೆ. ಸಾಹಿತ್ಯ ಮತ್ತು ಸಾಹಿತ್ಯ ಸಂಸ್ಥೆಗಳು ಕೆರಳಿಸುವ ಕೆಲಸ ಮಾಡಬಾರದು. ಮನಸ್ಸು ಅರಳಿಸುವ ಕೆಲಸ ಮಾಡಬೇಕಿದೆ ಎಂದು ಅಂಬಾತನಯ ಮುದ್ರಾಡಿ ಸಲಹೆ ನೀಡಿದರು.
ಸಾಹಿತ್ಯ ಜೀವನಾನುಭವ, ಸಂಸ್ಕೃತಿ, ನೆಮ್ಮದಿ, ಪ್ರಿಯತಮೆ, ಗುರುಸ್ಥಾನ, ಗೆಳೆತನ, ಮಾರ್ಗದರ್ಶನ ನೀಡುತ್ತದೆ, ನಾವೆಲ್ಲರೂ ಸೇರಿ ಸಾಹಿತ್ಯ ಕ್ಷೇತ್ರವನ್ನು ಉಳಿಸಿ ಬೆಳೆಸಬೇಕಿದೆ ಎಂದು ಅಂಬಾತನಯ ಮುದ್ರಾಡಿ ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಸೋಮೇಶ್ವರ ಶ್ರೀನಿವಾಸ ಶೆಟ್ಟಿ ಸಮ್ಮೇಳನ ಗೌರವ ಸ್ವೀಕರಿಸಿ ಮಾತನಾಡಿ, ನಮ್ಮೂರಿನಲ್ಲಿ ನನಗೆ ಬಹುದೊಡ್ಡ ಗೌರವ ನೀಡಿದ್ದಕ್ಕೆ ಎಲ್ಲರಿಗೂ ಋಣಿಯಾಗಿದ್ದೇನೆ. ಇನ್ನಷ್ಟು ಕನ್ನಡಮ್ಮನ ಸೇವೆ ಮಾಡಲು ಶಕ್ತಿ ಬಂದಿದೆ. ದೇವರಾಯರ ಕಿಸೆ ಬರಿದಾದರೂ ಹೃದಯ ತುಂಬಿದೆ, ಹೆಬ್ರಿಯ ಮಣ್ಣಿನಲ್ಲಿ ಕಾವ್ಯದ ಗುಣವಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಸೋಮೇಶ್ವರ ಶ್ರೀನಿವಾಸ ಶೆಟ್ಟಿ ಮತ್ತು ಅವರ ಪತ್ನಿ ಅನಿತಾ ಎಸ್‌ಶೆಟ್ಟಿ ಮತ್ತು ಸಾಹಿತ್ಯ ಪೋಷಕ ಹೆಬ್ರಿ ಭಾಸ್ಕರ ಜೋಯಿಸ್‌ಅವರನ್ನು ಗೌರವಿಸಲಾಯಿತು.
ಸಮ್ಮೇಳನದ ರೂವಾರಿ ದೇವರಾಯ ಪ್ರಭು ಮಾತನಾಡಿ, ಹೆಬ್ರಿಯಲ್ಲಿ ಅಭೂತಪೂರ್ವ ಯಶಸ್ವಿಯಾಗಿ ಸಮ್ಮೇಳನ ನಡೆಸಲು ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿ ಹೆಬ್ರಿಯ ಸೌರಭದ ವಿಶೇಷ ಪ್ರೇರಣೆಯಿಂದ ನಮ್ಮ ಸಾಹಿತ್ಯದ ರಥ ಜಿಲ್ಲೆಯಾದ್ಯಂತ ಸಂಚರಿಸಿ ನಿಸ್ವಾರ್ಥವಾಗಿ ಕನ್ನಡದ ಸೇವೆ ನಡೆಯಲಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ ಹೆಬ್ರಿ ತಾಲೂಕು ಘಟಕದ ಪೂರ್ವಾಧ್ಯಕ್ಷ ಟಿ.ಜಿ.ಆಚಾರ್ಯ, ಹೆಬ್ರಿ ಗ್ರಾಮ ಪಂಚಾಯತಿ ಸದಸ್ಯ ಎಚ್. ಜನಾರ್ಧನ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್‌ಕೆ. ಅಡ್ಯಂತಾಯ, ಉಪಾಧ್ಯಕ್ಷ ಪುಟ್ಟಣ್ಣ ಭಟ್ ಶಿವಪುರ, ಸೀನಿಯರ್‌ಚೇಂಬರ್‌ಇಂಟರ್‌ನ್ಯಾಷನಲ್‌ಹೆಬ್ರಿ ಘಟಕದ ಅಧ್ಯಕ್ಷ ಪ್ರಕಾಶ್‌ಶೆಟ್ಟಿ, ಮುದ್ರಾಡಿ ಭಕ್ರೆಮಠದ ಮುಖ್ಯಸ್ಥ ಡಾ. ಮುದ್ರಾಡಿ ವಾಸುದೇವ ಭಟ್, ಬೆಳ್ವೆ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಹಾಸ್ಯ ಸಾಹಿತಿ ಸಂಧ್ಯಾ ಶೆಣೈ, ಹೆಬ್ರಿ ರಾಘವೇಂದ್ರ ಚಾರಿಟೇಬಲ್‌ಟ್ರಸ್ಟ್‌ಅಧ್ಯಕ್ಷೆ ಡಾ.ಭಾರ್ಗವಿ ಆರ್.ಐತಾಳ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಿಸಿದರು.
ಸಾಹಿತ್ಯ ಮತ್ತು ಜೀವನ ಮೌಲ್ಯ – ವಿಚಾರ ಗೋಷ್ಠಿ :
ನುಡಿದಂತೆ ನಡೆಯಬೇಕು : ಯೋಗೀಶ್‌ಭಟ್
ಹೆಬ್ರಿ : ನಮ್ಮ ಆಚಾರ ವಿಚಾರ ಚಿಂತನೆಗಳು ಬೇರೆಬೇರೆ ಇರಬಾರದು, ನಾವೆಲ್ಲ ಮನುಷ್ಯರಾಗಿ ನುಡಿದಂತೆ ನಡೆಯಬೇಕು ಎಂದು ಸಾಹಿತ್ಯ ಮತ್ತು ಜೀವನ ಮೌಲ್ಯ – ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಸಾಹಿತ್ಯ ಪೋಷಕರಾದ ಉದ್ಯಮಿ ಹೆಬ್ರಿ ಯೋಗೀಶ್‌ಭಟ್ ಹೇಳಿದರು.
ಸಂಪನ್ಮೂಲ ವ್ಯಕ್ತಿಯಾದ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್, ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ರಾಜೇಶ್‌ಕುಡಿಬೈಲ್‌ಹಾಗೂ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಅಕ್ಷಿತಾ ಕೆ.ಶೆಟ್ಟಿ ವಿಚಾರ ಮಂಡನೆ ಮಾಡಿದರು.