ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಭಾರತದ ಪ್ರಾಚೀನ ಪರಂಪರೆಯ ಓರ್ಥೋ ಡೋಕ್ಸ್ ಸಿರಿಯನ್ ಇಗರ್ಜಿಯಾದ ಸಾಸ್ತಾನ ಸೈಂಟ್ ಥೋಮಸ್ ಇಗರ್ಜಿ ನವೀಕೃತಗೊಂಡು ಮಂಗಳವಾರ ಪವಿತ್ರೀಕರಣ ಹಾಗೂ ಉದ್ಘಾಟನಾ ಸಮಾರಂಭ ಸಂಜೆ ಜರುಗಿತು.
ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಮಲಂಕರ ಓರ್ಥೋ ಡೋಕ್ಸ್ ಸಿರಿಯನ್ ಸಭೆಯ ಪರಮಾಧ್ಯಕ್ಷರಾದ ಪರಮ ಪೂಜ್ಯ ಬಸಲಿಯೋಸ್ ಮಾರ್ಥೋಮ ಮ್ಯಾಥ್ಯೂಸ್ ತೃತೀಯ, ಕೊಚ್ಚಿ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷ ಯಾಕೋಬ್ ಮಾರ್ ಐರೇನಿಯಸ್ ,ಅಹಮ್ಮದಾಬಾದ್ ಧರ್ಮಪ್ರಾತ್ಯದ ಧರ್ಮಾಧ್ಯಕ್ಷ ಗೀವರ್ಗೀಸ್ ಮಾರ್ ಯುಲಿಯೋಸ್ ಇವರನ್ನು ಬ್ರಹ್ಮಾವರ ಎಸ್ ಎಂ ಎಸ್ ಚರ್ಚ್ ಬಳಿಯಲ್ಲಿ ಬ್ರಹ್ಮಾವರ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಯಾಕೋಬ್ ಮಾರ್ ಏಲಿಯಾಸ್ ಮತ್ತು ಚರ್ಚ್‍ನ ಗಣ್ಯರು ಸ್ವಾಗತಿಸಿ ಬರಮಾಡಿಕೊಂಡರು.
ಬ್ರಹ್ಮಾವರದಿಂದ ಹಲವಾರು ವಾಹನ ಮತ್ತು ಟ್ಯಾಬ್ಲೊಗಳ ಮೂಲಕ ಮೆರವಣಿಗೆಯಲ್ಲಿ ಸಾಸ್ತಾನ ನೂತನ ಚರ್ಚ್ ತನಕ ಸಾಗಿ ಬಂದು ಫಾದರ್ ನೋವೇಲ್ ಲೂಯಿಸ್ ಸೇರಿದಂತೆ ನಾನಾ ಭಾಗದಿಂದ ಬಂದ ಧರ್ಮಗುರುಗಳು ಬರಮಾಡಿಕೊಂಡರು.
ಈ ಸಂದರ್ಬ ಮಕ್ಕಳು ಮಹಿಳೆಯರೂ ಪರುಷರು ಸೇರಿದಂತೆ ಪುಷ್ಪ ನಮನ ನೀಡಿ ಸ್ವಾಗತಿಸಿಕೊಂಡರು.
ಬಳಿಕ ಮುಖ್ಯ ಧ್ವಾರವನ್ನು ಉದ್ಘಾಟಿಸಿ ದೀಪ ಬೆಳಗಿ ನಾನಾ ಧಾರ್ಮಿಕ ವಿಧಿಗಳ ಮೂಲಕ ಪವೀತ್ರಿಕರಣ ನೆರವೇರಿಸಿದರು. ಬಳಿಕ ಸಂದ್ಯಾ ಪ್ರಾರ್ಥನೆ ಜರುಗಿತು.
ಜೀಣೋದ್ಧಾರದ ಅಧ್ಯಕ್ಷ ಮೋಸೆಸ್ ರೋಡ್ರಿಗಸ್ , ಕಾರ್ಯದರ್ಶಿ ರೋಬರ್ಟ್ ರೋಡ್ರಿಗಸ್ , ಖಜಾಂಚಿ ಜೇರಾಲ್ಡ್ ರೋಡ್ರಿಗಸ್ ಮತ್ತು ಟ್ರಸ್ಟಿ ಲಾರೆನ್ಸ್ ಅಲ್ಮೇಡಾ , ಮಿಲ್ಟನ್ ಅಲ್ಮೇಡಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.