ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಎತ್ತಿ ಆಡಿಸುವ ವೇಳೆ ಕೆಳಗೆ ಬಿದ್ದು ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಪುರ ಗ್ರಾಮದ ಮುಳ್ಳುಗುಡ್ಡೆಯಲ್ಲಿ ನಡೆದಿದೆ.
ಜನತಾ ಕಾಲೋನಿಯ ಕೃಷ್ಣ – ಶಕುಂತಳಾ ದಂಪತಿಯ ಎರಡೂವರೆ ವರ್ಷದ ಸಾಕ್ಷಿ ಗಂಭೀರವಾಗಿ ಗಾಯಗೊಂಡ ಮಗು.
Advertisement. Scroll to continue reading.
ಮಂಗಳವಾರ ರಾತ್ರಿ ಮನೆಯ ಬದಿಯಲ್ಲಿರುವ ಗುಡ್ಡದ ದೈವದ ತಂಬಿಲ ಇದ್ದು, ಅದರ ಊಟಕ್ಕೆ ಮನೆಯ ಬಳಿವಿರುವ ನಮ್ಮ ಸಂಬಂಧಿ ರಾಜು ಎಂಬುವವರು ರಾತ್ರಿ ಸಮಯ ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯ ಛಾವಡಿಯಲ್ಲಿ ಸಾಕ್ಷಿ ಅಟವಾಡುತ್ತಿರುವಾಗ ಮಗುವನ್ನು ಎತ್ತಿ ಅಡಿಸುವ ಸಲುವಾಗಿ ಮಗುವನ್ನು ಎರಡು ಕೈಯಿಂದ ಎತ್ತಿ ಅಟ ಅಡಿಸಿದ್ದಾರೆ. ಈ ವೇಳೆ ಅತನ ಕೈಯಿಂದ ಕಳಗೆ ಜಾರಿ ನೆಲದ ಮೇಲೆ ಬಿದ್ದ ಪರಿಣಾಮ ಮಗುವಿನ ಎಡಕಿವಿಯ ಬಳಿ ತೀವ್ರ ಸ್ವರೂಪದ ಗಾಯವಾಗಿದೆ.
ರಾಜು ನಿರ್ಲಕ್ಷತನದಿಂದ ಘಟನೆ ನಡೆದಿದೆ ಎಂದು ದೂರಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.