ನವದೆಹಲಿ: 1988ರ ರಸ್ತೆ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪಂಜಾಬ್‌ನ ಪಟಿಯಾಲದಲ್ಲಿ 1988ರಲ್ಲಿ ನಡೆದ ಬೀದಿ ಕಲಹ ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾದ ಆರೋಪದಲ್ಲಿ 2018ರ ಮೇನಲ್ಲಿ ತಾನು ನೀಡಿದ್ದ ಆದೇಶವನ್ನು ಪರಾಮರ್ಶಿಸಿರುವ ಸುಪ್ರೀಂಕೋರ್ಟ್ ಕಾಂಗ್ರೆಸ್ ನಾಯಕ ನವಜೋತ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆಯಾಗಿದೆ.
ಇಂದು ಈ ಸಂಬಂಧ ಅರ್ಜಿಯ ವಿಚಾರಣೆ ನಡೆಸಿದ ಬಳಿಕ ತನ್ನ ತೀರ್ಪು ಪ್ರಕಟಿಸಿದಂತ ಸುಪ್ರೀಂ ಕೋರ್ಟ್ ನ್ಯಾಯಪೀಠವು 1988ರ ರಸ್ತೆ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
1988ರಲ್ಲಿ ನಡೆದ ರಸ್ತೆ ಕಲಹದಲ್ಲಿ ಪಟಿಯಾಲದ ನಿವಾಸಿ ಗುರ್ನಾಮ್ ಸಿಂಗ್ ಎಂಬುವವರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ 2018ರ ಮೇ ತಿಂಗಳಲ್ಲಿ ಸಿಧು ಅವರನ್ನು ದೋಷಮುಕ್ತಗೊಳಿಸಿ ನೀಡಿದ್ದ ತನ್ನ ಆದೇಶವನ್ನು ಮರು ಪರಿಶೀಲನೆ ನಡೆಸಿದಂತಹ ಸುಪ್ರೀಂಕೋರ್ಟ್, ಪರಿಷ್ಕೃತ ತೀರ್ಪು ನೀಡಿದೆ.