ಬ್ರಹ್ಮಾವರ: ಕಾರೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಇಬ್ಬರು ಸಜೀವ ದಹನವಾಗಿರುವುದು ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು ಎಂಬಲ್ಲಿ ಪತ್ತೆಯಾಗಿದೆ. ಮುಂಜಾನೆ 3:30 ರ ಹೊತ್ತಿಗೆ ಘಟನೆ ನಡೆದಿದೆ ಎನ್ನಲಾಗಿದೆ.
ಮೃತರನ್ನು ಬೆಂಗಳೂರಿನ ಆರ್ ಟಿ ನಗರದ ನಿವಾಸಿ ಯಶವಂತ ಯಾದವ್, ಜ್ಯೋತಿ ಎಂದು ಗುರುತಿಸಲಾಗಿದೆ
ಬೆಂಗಳೂರು ಮೂಲದ ದಂಪತಿಗಳಬ್ಬರು ತಾವಿದ್ದ ಸ್ವಿಫ್ಟ್ ಕಾರಿಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Advertisement. Scroll to continue reading.
ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದಾಗ ದಂಪತಿಗಳ ಶವ ಪತ್ತೆಯಾಗಿದೆ.
ಮೂರು ದಿನಗಳ ಹಿಂದೆ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು ಎಂದು ತಿಳಿದುಬಂದಿದೆ. ಮಂಗಳೂರಿನಲ್ಲಿ ಕಾರು ಬಾಡಿಗೆ ಪಡೆದ ಜೋಡಿ ಇದೀಗ ಶವವಾಗಿ ಪತ್ತೆಯಾಗಿದೆ.