ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಗುಜರಾತ್, ರಾಜಸ್ಥಾನ ವಿರುದ್ಧ 7 ವಿಕೆಟ್‌ಗಳ ಜಯದೊಂದಿಗೆ ಐಪಿಎಲ್ ಕಿರೀಟವನ್ನು ಗೆದ್ದುಕೊಂಡಿತು. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದು ತೀವ್ರ ಪೈಪೋಟಿಯ ಕದನ ನಡೆದಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ಸ್ ತಂಡ ದೊಡ್ಡ ಮೊತ್ತವನ್ನು ಗಳಿಸಲು ವಿಫಲವಾಗಿದೆ.
ಹಾರ್ದಿಕ್ ಮೂರು ವಿಕೆಟ್ ಪಡೆದು 34 ರನ್ ಗಳಿಸಿ ಆಲ್ ರೌಂಡ್ ಪ್ರದರ್ಶನ ನೀಡಿದರು. ರಾಜಸ್ಥಾನ್ ರಾಯಲ್ಸ್ ವಿರುದ್ಧ ವೃದ್ಧಿಮಾನ್ ಸಹಾ ಮತ್ತು ಮ್ಯಾಥ್ಯೂ ವೇಡ್ ಆರಂಭದಲ್ಲಿ ಪತನಗೊಂಡ ನಂತರ ಟೈಟಾನ್ಸ್ ಪವರ್‌ಪ್ಲೇನಲ್ಲಿ ಎರಡು ಪ್ರಮುಖ ಹೊಡೆತಗಳನ್ನು ಅನುಭವಿಸಿತು. ಆದರೆ ಗಿಲ್ ಮತ್ತು ಮಿಲ್ಲರ್ ಚೊಚ್ಚಲ ಆಟಗಾರರು ಅಂತಿಮ ಗೆರೆಯನ್ನು ದಾಟುವುದನ್ನು ಖಚಿತಪಡಿಸಿಕೊಂಡರು. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಕಬಳಿಸಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 20 ಓವರ್ ಗಳಲ್ಲಿ 130/9 ಸಾಧಾರಣ ಮೊತ್ತಕ್ಕೆ ಸೀಮಿತಗೊಳಿಸಿದರು.
ಬೆನ್ನತ್ತಿದ ಗುಜರಾತ್ ಟೈಟನ್ಸ್ ಆರಂಭಿಕ ಶುಭ್‌ಮನ್ ಗಿಲ್ (45), ವೃದ್ಧಿಮಾನ್ ಸಹಾ (5), ನಾಯಕ ಹಾರ್ದಿಕ ಪಾಂಡ್ಯ (34) ಮ್ಯಾಥ್ಯೂ ವೇಡ್ (8) ಮತ್ತು ಡೇವಿಡ್ ಮಿಲ್ಲರ್ (32) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿ ಐಪಿಎಲ್ 2022ರ ಚಾಂಪಿಯನ್‌ಗಳಾದರು.