Connect with us

Hi, what are you looking for?

Diksoochi News

ರಾಜ್ಯ

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಸಿಎಸ್ ಗೆ ವರದಿ ಸಲ್ಲಿಸಿದ ಎಂಡಿ ರೂಪಾ ಮೌದ್ಗಿಲ್

1

ಬೆಂಗಳೂರು : ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ರಾಜ್ಯ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲಾಗಿದೆ. ನಿಗಮದ ಎಂಡಿ ರೂಪಾ ಮೌದ್ಗಿಲ್ ಸುದೀರ್ಘ 6 ಪುಟಗಳ ದೂರಿನ ವರದಿ ಸಲ್ಲಿಸಿದ್ದಾರೆ. ವರದಿಯಲ್ಲಿ ನಿಗಮದಲ್ಲಿ ರಾಘವೇಂದ್ರ ಶೆಟ್ಟಿ ಎಸಗಿರುವ ಅವ್ಯವಹಾರ, ಅಧಿಕಾರ ದುರುಪಯೋಗ ಮತ್ತು ದುರ್ನಡತೆ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಬೇಳೂರು ರಾಘವೇಂದ್ರ ಶೆಟ್ಟಿ ಅವ್ಯವಹಾರ ಕುರಿತು ಈ ಹಿಂದೆಯೂ ಸಿಎಸ್‌ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ದೂರು ನೀಡಿದ್ದರು.

ಪಿಎಸ್ಐ ಅಕ್ರಮ ನೇಮಕಾತಿ ಹಗರಣದಲ್ಲಿ ರಾಘವೇಂದ್ರ ಶೆಟ್ಟಿ ಪಿಎ ಆಗಿದ್ದ ಶ್ರೀಕಾಂತ್ ಬಂಧನ ಆಗಿರುವ ಕಾರಣ ಹಗರಣದಲ್ಲಿ ರಾಘವೇಂದ್ರ ಶೆಟ್ಟಿ ಪಾತ್ರದ ಬಗ್ಗೆ ತನಿಖೆ ನಡೆಸಬೇಕು. ರಾಘವೇಂದ್ರ ಶೆಟ್ಟಿ ಡಾಕ್ಟರೇಟ್ ಪದವಿ ಪಡೆದಿರುವ ಹಿನ್ನೆಲೆಯ ಬಗ್ಗೆ ತನಿಖೆ ನಡೆಸಬೇಕು. ನಿಗಮದ ಶೋ ರೂಂನಿಂದ ಹಲವು ಬೆಲೆಬಾಳುವ ಶ್ರೀಗಂಧದ ಮೂರ್ತಿ ತೆಗೆದುಕೊಂಡು ಹೋಗಿದ್ದಾರೆ. ಅಧ್ಯಕ್ಷರಾಗಿದ್ದ ಆರಂಭದಲ್ಲಿ ಮಹಿಳಾ ಪಿಎ ಬೇಕು ಎಂದು ಒತ್ತಾಯಿಸಿದ್ದರು. ಫೆಬ್ರವರಿಯಲ್ಲಿ ಒಂದು ಬಾರಿ ಮಹಿಳಾ ಸಿಬ್ಬಂದಿಯನ್ನು ಸಂಜೆ 6.30 ಕಳೆದರೂ ಕಚೇರಿಯಲ್ಲೇ ಇರುವಂತೆ ಹೇಳಿದ್ದರು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಒತ್ತಡ ಹೇರುವ ಕೆಲಸ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಿಸಲು ಪರವಾನಗಿ ನೀಡಬೇಕು ಎಂದು 6 ಪುಟಗಳ ದೂರಿನಲ್ಲಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಹದಿನಾರು ಗಂಭೀರ ಆರೋಪಗಳನ್ನು ಎಂಡಿ ರೂಪಾ ಮೌದ್ಗಿಲ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Advertisement. Scroll to continue reading.

ರೂಪಾ ವಿರುದ್ಧ ಬೇಳೂರು ಇನ್ನಷ್ಟು ದೂರು :

ಮತ್ತೊಂದೆಡೆ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್‌ ಅವರ ವಿರುದ್ಧ ಬುಧವಾರ ಮತ್ತೊಂದು ದೂರನ್ನು ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ನೀಡಿದ್ದಾರೆ. ಅದರಲ್ಲಿ ರೂಪಾ ತಾವು ನಡೆಸಿರುವ ಅಕ್ರಮಕ್ಕೆ ಕಡತಗಳನ್ನು ಸರಿಪಡಿಸುವ, ನಾಶಪಡಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂರು ಕಾರಿಗೆ ಡೀಸೆಲ್‌ ಬಿಲ್‌ ಮಾಡಿಸಿಕೊಳ್ಳಲು ಅನುಕೂಲವಾಗಲಿ ಎಂದು 2 ವರ್ಷದಿಂದ ಕೆಲಸ ಮಾಡುತ್ತಿದ್ದ ಹಳೆಯ ಅಕೌಂಟೆಂಟ್‌ ಸುಭೇಶ್‌ ಅವರಿಗೆ ಕಿರುಕುಳ ನೀಡಿ ಓಡಿಸಿ ಶೋ ರೂಂನಲ್ಲಿ ಕ್ಯಾಶಿಯರ್‌ ಆಗಿದ್ದ ಶ್ರೀಧರ್‌ ಎಂಬ ವ್ಯಕ್ತಿಯನ್ನು ಅನಧಿಕೃತವಾಗಿ ಜಿ.ಎಂ. ಹುದ್ದೆಗೆ ನೇಮಕ ಮಾಡಿಕೊಂಡಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಹೇಳಿದ್ದು,

ವೈಯಕ್ತಿಕ ಕೆಲಸದ ಮೇಲೆ ತೆರಳುವಾಗ ವಿಮಾನದ ಟಿಕೆಟ್‌, ಹೋಟೆಲ್‌ ವಾಸ್ತವ್ಯ ಮತ್ತು ಕಚೇರಿಯ ಸಿಬ್ಬಂದಿಯ ಲೆಕ್ಕವನ್ನೂ ತೋರಿಸಿದ್ದಾರೆ. ಮೂವರು ಚಾಲಕರನ್ನು ನೇಮಿಸಿಕೊಂಡು ಸುಮಾರು 1.25 ಕೋಟಿಗೂ ಅಧಿಕ ಹಣವನ್ನು ನಿಗಮಕ್ಕೆ ಹೊರೆ ಮಾಡಿದ್ದಾರೆ. ಈ ಬಗ್ಗೆ ನಿಗಮದಲ್ಲಿ ದಾಖಲೆಗಳಿದ್ದು, ಪರಿಶೀಲನೆ ನಡೆಸಿ ರೂಪಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.

Advertisement. Scroll to continue reading.

ಅಲ್ಲದೇ, ನಿಗಮದ ಶೋ ರೂಂಗಳಲ್ಲಿ ವಿದೇಶದ ಮತ್ತು ಬೆಂಗಳೂರಿನ ಸ್ನೇಹಿತರಿಗೆ ಶೇ.30ರಷ್ಟುರಿಯಾಯಿತಿ ನೀಡಿದ್ದಾರೆ. ಹೀಗೆ ರಿಯಾಯಿತಿ ನೀಡಿದರೆ ಮಂಡಳಿಗೆ ತಿಳಿಸಬೇಕೆಂಬ ನಿಯಮವಿದೆ. ಆದರೆ ಇದನ್ನು ಮಂಡಳಿಯ ಗಮನಕ್ಕೆ ತಂದಿಲ್ಲ. ಕಚೇರಿಯ ಸಿಬ್ಬಂದಿಯನ್ನು ವೈಯಕ್ತಿಕ ಕೆಲಸಕ್ಕೆ ಕಳುಹಿಸುತ್ತಿದ್ದು, ಈ ಬಗ್ಗೆ ತನಿಖೆ ಆಗಬೇಕು. ಎರಡು ದಿನದಿಂದ ನನ್ನ ಕಚೇರಿಯ ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಟೆಂಡರ್‌ ಅನ್ನು 5 ಲಕ್ಷಕ್ಕೆ ಮಿತಿಗೊಳಿಸಿ ಕೆಟಿಪಿಪಿ ನಿಯಮ ಪಾಲಿಸದೆ ತುಂಡು ಗುತ್ತಿಗೆ ನೀಡಿ ಬೋರ್ಡ್‌ ಗಮನಕ್ಕೆ ತರದೆ ಬಿಲ್‌ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ 75 ಲಕ್ಷ ಅನುದಾನ ಬರುತ್ತದೆ ಎಂದು ತಪ್ಪು ಮಾಹಿತಿ ನೀಡಿ ಹೈದರಾಬಾದ್‌ನಲ್ಲಿ ನಿಗಮದ ಶೋ ರೂಂ ಉದ್ಘಾಟನೆಗೆ 58 ಲಕ್ಷ ರೂ. ಖರ್ಚು ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಕಡತ ಕೇಳಿದರೆ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!