ವರದಿ : ಬಿ.ಎಸ್.ಆಚಾರ್ಯ
ಬಾರಕೂರು : ಹೇರಾಡಿ ಚೌಳಿಕೆರೆ ಬಳಿಯ ಎನ್ ಆಕಾರದ ಅಪಾಯಕಾರಿ ತಿರುವಿನ ರಸ್ತೆಗೆ ಕಾಯಕಲ್ಪ ದೊರಕಿದೆ.
ಅನೇಕ ಅಪಘಾತಗಳು ಇಲ್ಲಿ ಸಂಭವಿಸಿದ ಕುರಿತು ಮತ್ತು ಕಳೆದ ವರ್ಷ ವ್ಯಕ್ತಿಯೊಬ್ಬರ ಕಾರು ಇಲ್ಲಿನ ತಿರುವಿನಲ್ಲಿ ಕೆರೆಗೆ ಬಿದ್ದು ಮೃತ ಪಟ್ಟ ಘಟನೆಯ ಬಳಿಕ ಕೂಡಾ ರಸ್ತೆ ಅಗಲೀಕರಣ ಅಥವಾ ತಿರುವನ್ನು ಕಡಿತ ಮಾಡಿದಲ್ಲಿ ಅಪಘಾತಕ್ಕೆ ಕಡಿವಾಣ ಹಾಕಬಹುದು ಎಂದು ದಿಕ್ಸೂಚಿ ನ್ಯೂಸ್ ವಿಸ್ಕೃತ ವರದಿಮಾಡಿ ಗಮನಸೆಳೆದಿತ್ತು.
ವರದಿಯ ಪರಿಣಾಮ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿಶೇಷ ಮುತುವರ್ಜಿ ವಹಿಸಿ ರೂ ೩೦ ಲಕ್ಷ ವೆಚ್ಚದಲ್ಲಿ ಕೆರೆಯ ಒಂದು ಭಾಗಕ್ಕೆ ಕಾಂಕ್ರೀಟಿನ ಶಾಶ್ವತ ತಡೆ ಮತ್ತು ಅಗಲೀಕರಣ ಗೊಳಿಸಲು ಹಣ ಮಂಜೂರು ಮಾಡಿಸಿದ್ದರು.
ಮಳೆಯ ಕಾರಣ ಕೆರೆಯಲ್ಲಿ ನೀರು ತುಂಬಿ ಕಾಮಗಾರಿ ವೇಗ ಸ್ವಲ್ಪ ಕಡಿಮೆಯಾಗಿದ್ದು ಇದೀಗ ಕಾಮಗಾರಿ ಅಂತಿಮ ಹಂತ ತಲುಪಿದೆ.
ಬಾರಕೂರಿನ ಅನೇಕ ಭಾಗದಲ್ಲಿ ಜೈನ ಬಸದಿ ದೇವಸ್ಥಾನಗಳು ಇದ್ದು ಕೆಲವೊಂದು ಭಾಗದಲ್ಲಿ ತೀರಾ ಕಡಿಮೆ ಅಗಲ ಇದ್ದು , ಹಗಲು ಹೊತ್ತು ಸಂಚಾರ ಮಾಡಲು ಕೂಡಾ ತುಂಬಾ ಸಮಸ್ಯೆಯಾಗುತ್ತಿತ್ತು. ರಾತ್ರಿಯಂತೂ ಹೊಸ ಚಾಲಕರು ಹರ ಸಾಹಸ ಪಡಬೇಕಾಗಿದ್ದು ರಸ್ತೆ ಅಗಲೀಕರಣ ಬೇಕು ಎನ್ನುವ ಬಾರಕೂರಿನ ಜನತೆಗೆ ಸದ್ಯ ಇದೊಂದು ಭಾಗಕ್ಕೆ ಸ್ವಲ್ಪ ಮುಕ್ತಿದೊರೆತಂತಾಗಿದೆ .