ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ತಾಲೂಕು ತಹಶೀಲ್ದಾರ ರಾಜಶೇಖರ ಮೂರ್ತಿಯವರು ಭಾನುವಾರ ಬೆಳಿಗ್ಗೆ ಇಲ್ಲಿನ ನೀಲಾವರ ಪಂಚಮಿಕಾನನ ಕೂರಾಡಿ ಸೇತುವೆ ಬಳಿ ಸೀತಾನದಿಗೆ ಬಿದ್ದು ತಕ್ಷಣ ಸುದ್ದಿ ತಿಳಿದ ಉಡುಪಿ ಅಗ್ನಿ ಶಾಮಕದಳ ಮತ್ತು ಬ್ರಹ್ಮಾವರ ಗ್ರಹರಕ್ಷಕ ದಳದವರ ಕ್ಷಿಪ್ರ ಕಾರ್ಯಾಚರಣೆಯಿಂದ ಬಚಾವಾದ ಘಟನೆ ನಡೆದಿದೆ.
ಜೂನ್ ತಿಂಗಳಲ್ಲಿ ಅತೀ ಹೆಚ್ಚು ಪ್ರವಾಹ ಕಂಡುಬರುವ ಉಡುಪಿ ಜಿಲ್ಲೆಯಲ್ಲಿ ಇಲ್ಲಿನ ಸೀತಾನದಿಯಲ್ಲಿ ಬ್ರಹ್ಮಾವರ ತಾಲೂಕು ನೆರೆ ರಕ್ಷಣಾ ತಂಡದವರಿಂದ ನಡೆದ ಅಣಕು ಪ್ರದರ್ಶನದಲ್ಲಿ ಸ್ವತಹ: ಬ್ರಹ್ಮಾವರ ತಹಶೀಲ್ದಾರ ನದಿಗಿಳಿದು ಇಲ್ಲಿನ ತಂಡದ ಶಕ್ತಿ ಪ್ರದರ್ಶನ ಪರಿಶೀಲಿಸಿದರು.
ಸೀತಾ ನದಿ ತೀರದ ಕೂರಾಡಿ,ಬಂಡೀಮಠ, ನೀಲಾವರ , ಎಳ್ಳಂಪಳ್ಳಿಯ ಭಾಗದ ಜನರು ಸೇತುವೆ ಬಳಿ ನಿಂತ ಅಗ್ನಿ ಶಾಮಕದಳ ಗ್ರಹರಕ್ಷಕದಳ , ತಾಲೂಕು ಪಂಚಾಯತಿ ಅಧಿಕಾರಿಗಳು , ಅರಣ್ಯ ಇಲಾಖೆ ,ಕಂದಾಯ ಇಲಾಖೆಯ ದಂಡು ಕಂಡು ಜನಸ್ತೋಮ ಸೇರಿತ್ತು.
ಅಣಕು ಪ್ರದರ್ಶನದಲ್ಲಿ ಬೋಟ್ ವೊಂದರಲ್ಲಿ ಮುಳುಗು ತಜ್ಞರು ಲೈಫ್ ಜಾಕೇಟ್ , ಸಿದ್ದಗೊಂಡ ಹಗ್ಗ , ಬಳಿಕ ಪ್ರಥಮ ಚಿಕಿತ್ಸೆ ನೀಡಲು ದಾದಿಯರು , ತುರ್ತು ನೆರವಾಗುವ ಅಂಬೂಲೆನ್ಸ್ ಶಾಂತಿ ಸುವ್ಯವಸ್ಥೆಗೆ ಪೋಲೀಸರು ಇದೆಲ್ಲವೂ ಇದ್ದು ಆಡಳಿತ ವ್ಯವಸ್ಥೆ ಜನರಲ್ಲಿ ನೆರೆಯ ಅವಧಿಯಲ್ಲಿ ಮಾಡ ಬೇಕಾದ ಕಾರ್ಯದ ಕುರಿತು ಅರಿವು ಮೂಡಿಸಿತು.
ನೀಲಾವರ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬೇಬಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಗ್ರಾಮ ಪಂಚಾಯತಿ ಅಧ್ಯಕ್ಷ ಮಹೇಂದ್ರ ನೀಲಾವರ , ಅಭಿವೃದ್ಧಿ ಅಧಿಕಾರಿ ಹರೀಶ್ , , ಬ್ರಹ್ಮಾವರ ಪೋಲೀಸ್ ಅಧಿಕಾರಿ ಮುಕ್ತಾ , ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ ಇಬ್ರಾಹಿಂ ಪುರ , ಕ್ಷೇತ್ರ ಶಿಕ್ಷಣಾಧಿಕಾರಿ ಬಿಟಿ ನಾಯ್ಕ್ , ಗ್ರಹ ರಕ್ಷಕದಳದ ಸ್ಟೀವನ್ ಪ್ರಕಾಶ್ ಲೂಯಿಸ್ ಇನ್ನಿತರ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಮಾನವ ಪ್ರಕೃತಿ ಮೇಲೆ ಮಾಡುವ ದಾಳಿಯಿಂದ ಸ್ವತಹ ಮಾನವರ ರಕ್ಷಣೆಗೆ ಅಕಾಲಿಕ ಮಳೆ , ಪ್ರವಾಹ, ಅಗ್ನಿ ದುರಂತ ಉಂಟಾಗುತ್ತಿದೆ . ಸಾದ್ಯವಾದಷ್ಟು ಪ್ರಕೃತಿಯ ಸಮತೋಲನಕ್ಕೆ ಜನರು ಪ್ರಯತ್ನ ಮಾಡ ಬೇಕು.
ರಾಜಶೇಖರ ಮೂರ್ತಿ ಬ್ರಹ್ಮಾವರ ತಾಲೂಕು ತಹಶೀಲ್ದಾರ
ಪ್ರಕೃತಿ ವಿಕೋಪ ಸಮಯದಲ್ಲಿ ನಮಗೆ ವಸ್ತು ಸೊತ್ತುಗಳಿಗಿಂತ ಮಾನವ ಜೀವ ಮುಖ್ಯ . ಜೀವ ಇದ್ದರೆ ಏನೂ ಮಾಡಬಹುದು ಅದನ್ನು ರಕ್ಷಿಸುವ ಮೊದಲ ಕಾರ್ಯ ನಮ್ಮದು.ಸತೀಶ್ , ಅಗ್ನಿಶಾಮಕ ದಳದ ಮುಖ್ಯಸ್ಥರು ಉಡುಪಿ