ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಆರ್ಥಿಕ ಅಭಿವೃದ್ಧಿಗೆ ಆರ್ಥಿಕ ಸಾಕ್ಷರತೆ ಅತ್ಯಂತ ಮುಖ್ಯ. ಸರಕಾರದ ಎಲ್ಲಾ ಯೋಜನೆಗಳ ಹಣಕಾಸು ನೆರವು ನೇರವಾಗಿ ಬ್ಯಾಂಕ್ ಗೆ ಅಂದರೆ ಫಲಾನುಭವಿಗಳ ಖಾತೆ ಜಮೆ ಮಾಡಲಾಗುತ್ತಿದೆ. ಆದ್ದರಿಂದ ಬ್ಯಾಂಕ್ ಸೌಲಭ್ಯಗಳನ್ನು ಬಳಕೆ ಮಾಡುವ ಕುರಿತು ಜನರಿಗೆ ಮಾಹಿತಿ ನೀಡಿದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಬಹುದಲ್ಲದೇ, ಈ ಬಗ್ಗೆ ಜಾಗೃತಿ ಮೂಡಿಸುವುದರಿಂದ ಹಣದ ವಿಚಾರದಲ್ಲಿ ಕೆಲವು ಅವ್ಯವಹಾರಗಳಿಂದ ಮೋಸ ಹೋಗುವುದನ್ನು ತಪ್ಪಿಸ ಬಹುದಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಾಬು ಎಂ. ಹೇಳಿದರು.
ರುಡ್ಸೆಟ್, ಸಂಸ್ಥೆ ಬ್ರಹ್ಮಾವರದಲ್ಲಿ ನಡೆದ ಆರ್ಥಿಕ ಸಾಕ್ಷರತಾ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಟೂಲ್ ಕಿಟ್ ಹಾಗೂ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಸಂಜೀವ್ ಕುಮಾರ್, ಸಹಾಯಕ ಮಹಾ ಪ್ರಬಂಧಕರು, ಪ್ರಾದೇಶಿಕ ಕಛೇರಿ, ಕೆನರಾ ಬ್ಯಾಂಕ್, ಉಡುಪಿ ಇವರು ಮಾತನಾಡಿ, ಶಿಸ್ತು ಬದ್ಧವಾದ ತರಬೇತಿಯನ್ನು ಅತ್ಯಂತ ಶೃದ್ಧೆಯಿಂದ ಪಡೆದುಕೊಂಡಿರುವಿರಿ ಆರ್ಥಿಕ ಸಾಕ್ಷರತೆಯ ಮಹತ್ಕಾರ್ಯಕ್ಕೆ ಬಹಳ ಆಸಕ್ತಿಯಿಂದ ತೋಡಗಿಸಿಕೊಳ್ಳಲು ಕಂಕಣ ಬದ್ಧರಾದ ಎಲ್ಲಾ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕರಾದ ಅವಿನಾಶ್ ಅವರು, NRLM ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರಭಾಕರ್ ಆಚಾರ್, ಜಿಲ್ಲಾ ವ್ಯವಸ್ಥಾಪಕರಾದ ನವ್ಯಾ ಉಪಸ್ಥಿತರಿದ್ದರು.
ರುಡ್ಸೆಟ್, ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ್ ಜೈನ್ ನಿರೂಪಿಸಿದರು, ನಿರ್ದೇಶಕ ಲಕ್ಷ್ಮೀಶ್ ಏ.ಜಿ. ಸ್ವಾಗತಿಸಿದರು, ಉಪನ್ಯಾಸಕ ಸಂತೋಷ್ ಶೆಟ್ಟಿ ವಂದಿಸಿದರು.