Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಗರ್ಭಿಣಿಯರಿಗೆ ಉಚಿತ ಸೇವೆ ನೀಡುವ ಮೂಲಕ ಮನೆಮಾತಾಗಿದ್ದಾರೆ ಬೈಕಾಡಿಯ ಅಣ್ಣಪ್ಪ

5

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆ ಇರುವ ಎಲ್ಲಾ ಕಡೆ ಹಲವಾರು ಸಂಕಷ್ಟದ ಸಮಯದಲ್ಲಿ ಧಾವಿಸಿ ಬರುವ ಅಟೋ ಚಾಲಕರದು ವಿಶಿಷ್ಟ ಸೇವಾ ಕಾಯಕವಾಗಿದ್ದು, ಬ್ರಹ್ಮಾವರ ಬಳಿಯ ಬೈಕಾಡಿ ಗಾಂಧಿನಗರದ ಅಟೋ ಚಾಲಕ ಅಣ್ಣಪ್ಪನವರು ವಿನೂತನ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.

ಅವರ ಕೆ ಏ 20 ಡಿ. 5198 ಅಪೆ ಅಟೋ ರೀಕ್ಷಾದ ಒಂದು ಭಾಗದಲ್ಲಿ 24 / 7 ಜೊತೆಗೆ ಹಲವಾರು ಕನ್ನಡ ನುಡಿಮುತ್ತಿನೊಂದಿಗೆ ಮೊಬೈಲ್ ಸಂಖ್ಯೆ 7259836112, 8073188411 ಯೊಂದಿಗೆ ಗರ್ಭಿಣಿಯರಿಗೆ ಉಚಿತ ಸೇವೆ ಎಂದು ಬರೆದುಕೊಂಡಿದ್ದಾರೆ.

Advertisement. Scroll to continue reading.


ಇಲ್ಲಿನ ಆಸು ಪಾಸಿನ ಯಾರೇ ಗರ್ಭಿಣಿಯರನ್ನು ವೈದ್ಯರಲ್ಲಿ ತಪಾಸಣೆ ಅಥವಾ ಹೆರಿಗೆಗೆ ಹೋಗುವುದಿದ್ದರೆ ಇವರದು ಬಾಡಿಗೆ ರಹಿತವಾಗಿ ಉಚಿತ ಪ್ರಯಾಣವಾಗಿದೆ.
ಈಗಾಗಲೆ ಹಲವಾರು ಗರ್ಭಿಣಿಯರು ಇವರ ಅಟೋದಲ್ಲಿ ಪ್ರಯಾಣ ಮಾಡಿ ಇವರ ಸೇವೆಯನ್ನು ಪಡೆದುಕೊಂಡು ಕೃತಜ್ಞತೆ ಸಲ್ಲಿಸಿದ್ದಾರೆ.


ಬಹುತೇಕ ಕಡೆಯಲ್ಲಿ ಅಟೋ ಚಾಲಕರು ಪ್ರಯಾಣಿಕರು ಬಿಟ್ಟು ಹೋದ ಬೆಲೆ ಬಾಳುವ ವಸ್ತು ಅಥವಾ ದಾಖಲೆ, ವಡವೆಗಳನ್ನು ಪ್ರಯಾಣಿಕರಿಗೆ ತಲುಪಿಸಿ ಸಾರ್ವಜನಿಕವಾಗಿ ಮೆಚ್ಚುಗೆ ಪಡೆದ ಉದಾಹರಣೆ ಇದ್ದರೆ ಅಣ್ಣಪ್ಪನವರದು ಹೀಗೊಂದು ವಿನೂಥನ ಮಾನವ ಸೇವೆಯನ್ನು ಕಂಡುಕೊಂಡಿದ್ದಾರೆ.

ಕನ್ನಡ ಖಾಸಗಿ ವಾಹಿನಿಯೊಂದರ ಕಾಮಿಡಿ ಕಾರ್ಯಕ್ರಮದಲ್ಲಿ ಅಟೋ ಚಾಲಕರ ಕುರಿತು ಹಲವಾರು ವಿನೂತನ ಕಾರ್ಯಕ್ರಮದಲ್ಲಿ ಹಿಗೋಂದು ಡೈಲಾಗ್ ಇತ್ತು. ನಾನು ಅದನ್ನು ಅಳವಡಿಸಿಕೊಂಡೆ ಅಷ್ಟೆ. ಸೇವೆ ಮಾಡುವ ಮನಸ್ಸು ಇದ್ದವರಿಗೆ ಹಲವಾರು ದಾರಿ ಇದೆ.ಅಣ್ಣಪ್ಪ, ಅಟೋ ಚಾಲಕ, ಬೈಕಾಡಿ ಗಾಂಧಿ ನಗರ

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!