ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ಭಾರತೀಯ ಸೇನಾ ಯೋಧರು ಕಳೆದ 14 ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಹರೇಂದ್ರ ನೇಗಿ ಮತ್ತು ಪ್ರಕಾಶ್ ಸಿಂಗ್ ರಾಣಾ ನಾಪತ್ತೆಯಾಗಿರುವ ಸೈನಿಕರು. ಮೇ 28 ರಂದು ಇವರಿಬ್ಬರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಇವರನ್ನು ಅರುಣಾಚಲ ಪ್ರದೇಶದ ಭಾರತ-ಚೀನಾ ಗಡಿಯಲ್ಲಿರುವ ಥಕ್ಲಾ ಪೋಸ್ಟ್‌ನಲ್ಲಿ ಯೋಧರನ್ನು ನಿಯೋಜಿಸಲಾಗಿತ್ತು.
Advertisement. Scroll to continue reading.
ಸಹಸ್‌ಪುರದ ಬಿಜೆಪಿ ಶಾಸಕ ಸಹದೇವ್ ಸಿಂಗ್ ಪುಂಡೀರ್ ಅವರು ಜವಾನನ ಕುಟುಂಬವನ್ನು ಅವರ ಸೈನಿಕ ಕಾಲೋನಿಯ ನಿವಾಸದಲ್ಲಿ ಶುಕ್ರವಾರ ಭೇಟಿಯಾಗಿದ್ದರು. “ನಾನು ಈ ಬಗ್ಗೆ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಏನಾದರೂ ಮಾಡಲಾಗುವುದು ಎಂದು ಅವರು ನನಗೆ ಭರವಸೆ ನೀಡಿದ್ದಾರೆ” ಎಂದು ಪುಂಡೀರ್ ಪಿಟಿಐಗೆ ತಿಳಿಸಿದರು. ನಾಪತ್ತೆಯಾಗಿರುವ ಜವಾನನ ವಿವರಗಳನ್ನು ಕೇಂದ್ರ ಸಚಿವರಿಗೆ ಕಳುಹಿಸಲಾಗಿದೆ ಎಂದು ಪುಂಡೀರ್ ಹೇಳಿದ್ದಾರೆ.