ವರದಿ : ಬಿ.ಎಸ್.ಆಚಾರ್ಯ
ಕುಂದಾಪುರ : ಸದ್ಯೋಜಾತ ಭಟ್ ಇವರ ಮಾಗಧೇಯ ಕೃತಿ ಅನಾವರಣ ಕುಂದಾಪುರ ಜ್ಯೂನಿಯರ್ ಕಾಲೇಜು ಆವರಣದ ಕಲಾ ಮಂದಿರದಲ್ಲಿ ಜರುಗಿತು.
ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕೃತಿಕಾರರ ಪರಿಚಯ ಮಾಡಿ ಮಾತನಾಡಿ, ಸದ್ಯೋಜಾತರು ಬರೆದ ಎಲ್ಲಾ ಕೃತಿಗಳು ಅಧ್ಯಯನ ಇದೆ ರಾಷ್ಟ್ರೀಯತೆಯ ಚಿಂತನೆ ಇದೆ. ಇವರ ಯಾವ ಕೃತಿಗಳಿಗೆ ಕೂಡಾ ಟೀಕೆ ಮಾಡುವವರೆ ಇಲ್ಲ. ಇವರು ಕನ್ನಡಿಗರು. ನಮ್ಮ ಜಿಲ್ಲೆಯವರು ಎನ್ನಲು ಹೆಮ್ಮೆ ಎಂದರು.
ಲೇಖಕ ರಂಗ ಕರ್ಮಿ ಎಸ್ .ಎನ್. ಸೇತುರಾಮ್ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿ,
ನಮ್ಮ ಕೆಲವರು ಬರೆದ ಪುಸ್ತಕವನ್ನು ಓದಿ ನಾನು ದೇಶ ಸಂಸ್ಕೃತಿಯ ಬಗ್ಗೆ ನಾನು ಕೂಡಾ ಭಾರತೀಯತೆಯನ್ನು ನಿಂದಿಸಿದ್ದೆ. ಆದರೆ ಸದ್ಯೋಜಾತ ಭಟ್ಟರ ಒಡನಾಟದಿಂದ ರಾಷ್ಟ್ರೀಯತೆಯ ಅರಿವಾಗಿದೆ.
ಭಾರತ ಯಾವಾಗಲೂ ಸಂಪತ್ಭರಿತ ಮತ್ತು ಸಂಪನ್ಮೂಲ ಭರಿತವಾಗಿದ್ದ ಕಾರಣ ವಿದೇಶಿಯರೂ ಇಲ್ಲಿ ಆಳ್ವಿಕೆ ಮಾಡಿ ದೋಚಿಕೊಂಡು ಹೋಗಲು ಕಾರಣವಾಗಿದೆ. ಭಾರತೀಯರು ಭಾರತೀಯತೆಯನ್ನು ತಿಳಿಯಲು ಇವರ ಪುಸ್ತಕಗಳು ಸಹಕಾರಿಯಾಗಲಿದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷ ನಂದನ್ ಪ್ರಭು, ನಿವೃತ್ತ ಪ್ರೋಫೆಸರ್ ಕೆ.ಪಿ.ರಾವ್ , ಕೃತಿಕಾರ ಸದ್ಯೋಜಾತ ಭಟ್ ಉಪಸ್ಥಿತರಿದ್ದರು.