Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಸಣ್ಣ ನೀರಾವರಿ ಅಧಿಕಾರಿ ಹರೀಶ್ ಮನೆ ಮೇಲೆ ಎಸಿಬಿ ದಾಳಿ; ಕೆಜಿಗಟ್ಟಲೆ ಚಿನ್ನದ ಖಜಾನೆ ಪತ್ತೆ

1

ಉಡುಪಿ : ಇಂದು ರಾಜ್ಯಾದಾದ್ಯಂತ ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳ್ಳಗ್ಗೆ ಎಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಉಡುಪಿಯ ಅಧಿಕಾರಿಯೊಬ್ಬರ ಮನೆಗೆ ದಾಳಿ ನಡೆಸಿದ ಅವರು ಬಂಗಾರ ಖಾಜಾನೆಯನ್ನು ರೈಡ್‌ ಮಾಡಲು ಬಂದ ಅಧಿಕಾರಿಗಳೇ ಬೆಚ್ಚಿಬೀಳುವಂತಾಗಿದೆ.

ಉಡುಪಿ ಸಹಾಯಕ ಇಂಜಿನಿಯರ್‌ ಹರೀಶ್‌ ಮನೆಗೆ ಅಧಿಕಾರಿಗಳು ಇಂದು ದಾಳಿ ನಡೆಸಿದರು. ಈ ವೇಳೆ ಕಂತೆ ಕಂತೆ, ಹಣ ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಇಲಾಖೆಯ ಸಹಾಯಕ ಇಂಜಿನಿಯರ್‌ ಅಗಿ ಹರೀಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಡುಪಿಯ ಕೊರಂಗ್ರಪಾಡಿಯ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ 5 ಲಕ್ಷ ರೂಪಾಯಿ ನಗದು ಚಿನ್ನದ ತಟ್ಟೆ, ಅಪಾರ ಚಿನ್ನದ ಆಭರಣಗಳನ್ನು ಪತ್ತೆಯಾಗಿವೆ.

15ಕ್ಕೂ ಹೆಚ್ಚು ಚಿನ್ನದ ಬಳೆಗಳು, 30ಕ್ಕೂ ಹೆಚ್ಚು ಚಿನ್ನದ ಸರ, ನೆಕ್ಲೆಸ್‌ ಬ್ರಾಸ್ಲೈಟ್‌, ಚಿನ್ನದ ಒಡವೆ, ಉಂಗುರ,ದೇವರ ಮೂರ್ತಿಗಳು ಸಿಕ್ಕಿವೆ. ಹಾವಂಜೆ ಹಾಗೂ ಪೆರ್ಡೂರಿನಲ್ಲಿ ಪತ್ನಿಯ ಹೆಸರಿನಲ್ಲಿ 5 ಸರ್ವೆ ಸಂಖ್ಯೆಯಲ್ಲಿ 2 ನಿವೇಶನಗಳು ಪತ್ತೆಯಾಗಿವೆ. ಬ್ಯಾಂಕ್ ನಲ್ಲಿಯೂ ಎಫ್‌ಡಿ ಖಾತೆ ಹೊಂದಿದ್ದು, ಬ್ಯಾಂಕ್ ನಲ್ಲಿರುವ ನಗದುಗಳ ಬಗ್ಗೆಯೂ ಮಾಹಿತಿ ಸಂಗ್ರಹ ನಡೆಯುತ್ತಿದೆ. ಆಸ್ತಿ ಪತ್ರಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!