ಬೆಂಗಳೂರು: ದೇಶಾದ್ಯಂತ 777 ಚಾರ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಚಿತ್ರತಂಡಕ್ಕೆ ಮತ್ತೊಂದು ಸಂಭ್ರಮ. ಹೌದು, ರಕ್ಷಿತ್ ಶೆಟ್ಟಿ ಅಭಿಯನದ ಚಾರ್ಲಿ 777 ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಈ ಮೂಲಕ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಳಿಕ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಪಡೆದ ಎರಡನೇ ಚಿತ್ರ ಇದಾಗಿದೆ.
ಸಿಎಂ ಬೊಮ್ಮಾಯಿ ಖುದ್ದು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚಿದ್ದರು. ತಮ್ಮ ಮುದ್ದಿನ ಶ್ವಾನವನ್ನು ನೆನೆದು ಭಾವುಕರಾಗಿದ್ದ ಅವರು, ಚಿತ್ರ ವೀಕ್ಷಿಸಿದ ಬಳಿಕ ಎಲ್ಲರೂ ಈ ಚಿತ್ರ ವೀಕ್ಷಿಸಲು ಮನವಿ ಮಾಡಿದ್ದರು.
ಹೀಗಾಗಿ ಶ್ವಾನ ಸ್ವಾಸ್ಥ್ಯದ ಕುರಿತು ಜಾಗೃತಿ ಮೂಡಿಸುವ, ಪ್ರಾಣಿ ಹಿಂಸೆಯ ಸೂಕ್ಷ್ಮತೆಯನ್ನು ಎತ್ತಿ ಹಿಡಿದಿರುವ ಹಾಗೂ ಬೀದಿ ನಾಯಿಗಳನ್ನು ದತ್ತು ಪಡೆಯುವುದರ ಬಗ್ಗೆ ಸಂದೇಶವಿರುವ ಹಿನ್ನೆಲೆಯಲ್ಲಿ 777 ಚಾರ್ಲಿ ಸಿನಿಮಾಗೆ 6 ತಿಂಗಳ ವರೆಗೆ ಶೇ.100 ರಷ್ಟು ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.
Advertisement. Scroll to continue reading.
In this article:Charlie 777, Diksoochi news, diksoochi Tv, diksoochi udupi, Rakshit Shetty
Click to comment