ತಮಿಳುನಾಡು : ಕೊಯಂಬತ್ತೂರಿನಲ್ಲಿ ನಡೆದ ಏಷಿಯನ್ ಪವರ್ಲಿಫ್ಟಿಂಗ್ ಚಾಂಪಿಯನ್ಶಿಪ್ 2022
ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಪ್ರದೀಪ್ ಕುಮಾರ್ ಆಚಾರ್ಯ ಇವರು ಚಿನ್ನದ ಪದಕವನ್ನು ಗಳಿಸಿದ್ದಾರೆ.
83 ಕೆಜಿ ಸೀನಿಯರ್ ವಿಭಾಗದಲ್ಲಿ ಭಾಗವಹಿಸಿದ ಇವರು
ಸ್ಕ್ವಾಟ್ 300 ಕೆಜಿ ಬೆಂಚ್ ಪ್ರೆಸ್ 207.5 ಕೆಜಿ
ಡೆಡ್ ಲಿಫ್ಟ್ 275 ಕೆಜಿ ಒಟ್ಟು 787.5 ಕೆಜಿ ಭಾರ ಎತ್ತಿದರು.
ಕೊಲ್ಕತ್ತಾದ ಅಂಶ್ ಸಿಂಗ್ ದ್ವಿತೀಯ
ಸ್ಥಾನ, ಕಜಕಿಸ್ಥಾನದ “ಕಾಪ್ಶೆ ಅಮನ್” ತೃತೀಯ ಸ್ಥಾನ ಗಳಿಸಿದ್ದಾರೆ.
ಮಂಗಳೂರಿನ ಬಾಲಾಂಜನೇಯ ಜಿಮ್ನೇಸಿಯಂನ ಸದಸ್ಯರಾದ ಪ್ರದೀಪ್ ಕುಮಾರ್, ಸತೀಶ್ ಕುಮಾರ್ ಇವರ
ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಮುಂಬರುವ ಡಿಸೆಂಬರಿನಲ್ಲಿ ನ್ಯೂಜಿಲಂಡ್ ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ ನಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.
Advertisement. Scroll to continue reading.