ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕಮಲಶಿಲೆ ಗ್ರಾಮದ ಹಳ್ಳಿಹೊಳೆಯ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಲಾಗಿದೆ.
ಬೈಂದೂರು ಉಪ್ಪುಂದದ ಶ್ರೀಧರ ಮಡಿವಾಳ ಬಂಧಿತ ಆರೋಪಿ.
ಜೂ.18 ರಂದು ರಾತ್ರಿ ಸುಮಾರು ರಾಘವೇಂದ್ರ ಯಡಿಯಾಳ ಎಂಬವರ ಮನೆಯ ಕೋಣೆಯಲ್ಲಿ ಇರಿಸಿದ ಸುಮಾರು 1,30,000/- ಲಕ್ಷ ಬೆಲೆ ಬಾಳುವ 28 ಗ್ರಾಂ ತೂಕದ 2 ಚಿನ್ನದ ಬಳೆ ಸುಮಾರು 1,50,000 ಲಕ್ಷ ಬೆಲೆ ಬಾಳುವ ಮಲ್ಲಿಗೆ ಮಿಟ್ಟಿಯ 30 ಗ್ರಾಂ ನ ಉದ್ದ ಚಿನ್ನದ ಸರ -1, ಸುಮಾರು 20,000/-ಬೆಲೆ ಬಾಳುವ ಮೂರು ಹರಳಿನ 4 ಗ್ರಾಂ ಚಿನ್ನದ ಉಂಗುರ-1, ನಗದು ಹಣ 5000/- ರೂ ಕಳವುಗೈಯಲಾಗಿತ್ತು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
3,00000 ಮೌಲ್ಯದ 2 ಚಿನ್ನದ ಬಳೆಗಳು, ಮಲ್ಲಿಗೆ ಮಿಟ್ಟಿಯ ಚಿನ್ನದ ಸರ, ಚಿನ್ನದ ಉಂಗುರ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಎಮ್ . ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ರವರ ನಿರ್ದೇಶನದಂತೆ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ .ಕೆ , ಕುಂದಾಪುರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ರವರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಶಂಕರನಾರಾಯಣ ಪೊಲೀಸ್ ಠಾಣಾ ಪಿಎಸ್ಐ ಶ್ರೀಧರ ನಾಯ್ಕ ಹಾಗೂ ಸುದರ್ಶನ್ ಪಿಎಸ್ಐ ಹಾಗೂ ಸಿಬ್ಬಂದಿಯವರಾದ ಸೀತರಾಮ ಶೆಟ್ಟಿಗಾರ, ರಾಘವೇಂದ್ರ , ಗೋಪಾಲ ಕೃಷ್ಣ, ಮಂಜುನಾಥ್ ರಾಕೇಶ್ ಅನಿಲ್ ಕುಮಾರ್ ವಿಲ್ಫ್ರೆಡ್ ಡಿಸೋಜ ವಿಲಾಸ್ ರಾಥೋಡ್, ಆಲಿಂಗರಾಯ ಕಾಟೆ, ಚಂದ್ರ ಕುಮಾರ್ , ಜಯರಾಮ ನಾಯ್ಕ ಪಾಲ್ಗೊಂಡಿದ್ದರು.