ಕಾಪು : ಉಳಿಯಾರಗೋಳಿ, ಕೈಪುಂಜಾಲುವಿನ
ತಾಳಿ ತೋಟದ ನಿವಾಸಿ ವಿನೋದರ ಪೂಜಾರಿ (62 ವರ್ಷ) ಉಡುಪಿಯ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೂರ್ತೆ ಕೆಲಸ ಮಾಡುವಾಗ ಮರದಿಂದ ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಕೃಷಿಕರಾಗಿದ್ದ ಅವರು ಮೂರ್ತೆದಾರರಾಗಿದ್ದು, ಕುಲಕಸುಬುವನ್ನು ಮಾಡಿಕೊಂಡುದ್ದರು. ಮೃತರು ಸ್ಥಳೀಯವಾಗಿ ಜನೋಪಕಾರಿ ಕೆಲಸ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಜನಮನ್ನಣೆ ಗಳಿಸಿದ್ದರು.
Advertisement. Scroll to continue reading.
ಮೃತರ ಮನೆಗೆ ವಿನಯಕುಮಾರ್ ಸೊರಕೆ, ಕಾಪುಪುರಸಭೆ ಸದಸ್ಯ ಸದಸ್ಯೆ ಶೋಭಾ ಬಂಗೇರ ಭೇಟಿ ನೀಡಿ ಸಂತೈಸಿದರು.