ವಾಷಿಂಗ್ಟನ್ : ಉಭಯ ಪಕ್ಷೀಯ ಬಂದೂಕು ನಿಯಂತ್ರಣ ಮಸೂದೆ’ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಶನಿವಾರ ಸಹಿ ಹಾಕಿದ್ದಾರೆ. ಈ ಮಸೂದೆಗೆ ಅಮೆರಿಕದ ಕಾಂಗ್ರೆಸ್‌ನ ಉಭಯ ಸದನಗಳು ಶುಕ್ರವಾರವಷ್ಟೇ ಅನುಮೋದನೆ ನೀಡಿದ್ದವು
ಸೆನೆಟ್ ಗುರುವಾರ ತಡರಾತ್ರಿ ಅನುಮೋದಿಸಿದ ದ್ವಿಪಕ್ಷೀಯ ಬಂದೂಕು ಶಾಸನವನ್ನ ಸದನವು ಅನುಮೋದಿಸಿದ ಒಂದು ದಿನದ ನಂತರ ಬೈಡನ್ ಸಹಿ ಹಾಕಿದ್ದಾರೆ.
ಯುರೋಪಿನ ಎರಡು ಶೃಂಗಸಭೆಗಳಲ್ಲಿ ಭಾಗವಹಿಸಲು ವಾಷಿಂಗ್ಟನ್‌ನಿಂದ ಹೊರಡುವ ಮುನ್ನ ಮಸೂದೆಗೆ ಸಹಿ ಮಾಡಿದ ಬೈಡನ್, ‘ಗುಂಡಿನ ದಾಳಿಗೆ ಬಲಿಯಾದವರ ಕುಟುಂಬದವರು ನಮ್ಮಿಂದ ಏನನ್ನೋ ನಿರೀಕ್ಷಿಸಿದ್ದರು. ಅದನ್ನು ನಾವೀಗ ಮಾಡಿದ್ದೇವೆ’ ಎಂದು ಹೇಳಿದ್ದಾರೆ.
ಅಮೆರಿಕದಲ್ಲಿ ಇತ್ತೀಚೆಗೆ ಬಂದೂಕುಧಾರಿಗಳು ನಡೆಸಿದ ಸಾಮೂಹಿಕ ಗುಂಡಿನ ದಾಳಿಗಳಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದರು. ಕಳೆದ ತಿಂಗಳು ಟೆಕ್ಸಾಸ್‌ನ ಯವಾಲ್ಡೆಯ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ್ದ ಗುಂಡಿನ ದಾಳಿಯಲ್ಲಿ 19 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರು ಮೃತಪಟ್ಟಿದ್ದರು. ಈ ಘಟನೆ ನಡೆದ ತಿಂಗಳ ಬಳಿಕ, 13 ಶತಕೋಟಿ ಡಾಲರ್ ಮೊತ್ತದ ಪ್ಯಾಕೇಜ್‌ನ ಈ ಮಸೂದೆಯನ್ನು ಸಿದ್ಧಪಡಿಸಲಾಗಿತ್ತು.