Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಯಾಂತ್ರಿಕೃತ ಭತ್ತ ಬೇಸಾಯ (ಯಂತ್ರಶ್ರೀ) ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ

2

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ: ಯಾವೂದೇ ದೇಶದ ಜನರು ಅನ್ನ ಮತ್ತು ಆಹಾರವೇ ತಿನ್ನಬೇಕು ಹೊರತು ಚಿನ್ನ ತಿನ್ನಲು ಸಾಧ್ಯ ಇಲ್ಲ. ಕಾಲಕ್ಕೆ ಅನುಗುಣವಾಗಿ ಕೃಷಿಯಲ್ಲಿ ಕೂಡಾ ಯಾಂತ್ರೀಕರಣದ ಮೂಲಕ ರೈತರು ಆಹಾರ ಉತ್ಪಾದನೆ ಹೆಚ್ಚಿಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಮಂಗಳವಾರ ಬಾರ್ಕೂರು ಕೂಡ್ಲಿ ಉಡುಪರ ಮನೆಯಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ 2022 – 23 ನೇ ಸಾಲಿನಲ್ಲಿ ರಾಜ್ಯದಲ್ಲಿ 20,000 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ “ಯಾಂತ್ರಿಕೃತ ಭತ್ತ ಬೇಸಾಯ (ಯಂತ್ರಶ್ರೀ) ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದುಡಿಯುವ ಮನುಷ್ಯರಿಗೆ ಅವಕಾಶಗಳನ್ನು ಕಲ್ಪಿಸುವುದು ಮತ್ತು ಪ್ರೇರೇಪಣೆ ಮಾಡಿದಲ್ಲಿ ಮಾತ್ರ ಯಶಸ್ಸು ಸಾಧ್ಯ. ಹಲವಾರು ವರ್ಷದಿಂದ ಯಾಂತ್ರಿಕೃತ ಕೃಷಿಯನ್ನು ಅಳವಡಿಸಿಕೊಳ್ಳ ಬೇಕು ಎನ್ನುವುದು ಕೇವಲ ಭಾಷಣದಲ್ಲಿ ಮಾತ್ರವೇ ನಡೆದಿದೆ ಹೊರತು ಕಾರ್ಯದಲ್ಲಿ ಆಗಿಲ್ಲ. ಇದೀಗ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರತೀ ರೈತರು ಅಳವಡಿಸಿಕೊಂಡು ಯಶಸ್ಸು ಕಾಣಿರಿ ಎಂದರು.

Advertisement. Scroll to continue reading.


ಇದೇ ಸಂದರ್ಭದಲ್ಲಿ ಹಲವಾರು ಭಾಗದಲ್ಲಿ ಯೋಜನೆಯ ಮೂಲಕ ಸಾಧನೆ ಮಾಡಿದವರನ್ನು ಮತ್ತು ಸಂಘ ಸಂಸ್ಥೆಯವರನ್ನು ಸನ್ಮಾನಿಸಿ ,ಪ್ರಮಾಣ ಪತ್ರ ವಿತರಿಸಲಾಯಿತು.


ಪರಿಸರದ 3 ಭಜನಾ ತಂಡಗಳಿಗೆ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರು ಸಾಂಕೇತಿಕವಾಗಿ ಚಾಲನೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇಶಕ್ಕೆ ಮಾದರಿ.‌‌ ದೇವಸ್ಥಾನ , ಶಿಕ್ಷಣ ,ಆರೋಗ್ಯ ಸಂಘಟನೆ , ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ ವೀರೇಂದ್ರ ಹೆಗ್ಗಡೆಯವರು ಹಡಿಲು ಹಡಿಲು ಭೂಮಿಯಲ್ಲಿ ಯಾಂತ್ರೀಕೃತ ಭತ್ತದ ಬೇಸಾಯದಿಂದ ದೇಶದ ಆಹಾರ ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ.

ಭಾರತ ಆಹಾರ ಉತ್ಪಾದನೆಯಲ್ಲಿ ಪ್ರಪಂಚದ 6 ನೇ ಸ್ಥಾನದಲ್ಲಿದೆ ನಮ್ಮ ದೇಶದ ಹಣ್ಣು, ತರಕಾರಿ, ಭತ್ತ ಸೇರಿದಂತೆ ತೆಂಗು ಮತ್ತು ಅದರ ಉತ್ಪನ್ನಗಳಿಂದ ಆಗುವ ಅನೇಕ ಉಪಯುಕ್ತ ವಸ್ತುಗಳನ್ನು ಮಾರುಕಟ್ಟೆ ಮಾಡುವ ಕುರಿತು ಯುವ ಜನತೆ ಸರಕಾರದ ನಾನಾ ಯೋಜನೆಯ ಮೂಲಕ ಸ್ವಾವಲಂಬಿಯಾಗಬಹುದು.ಕಾರ್ಯಕ್ರಮವನ್ನು ಉದ್ಘಾಟಿಸಿದ ಕು.ಶೋಭಾ ಕರಂದ್ಲಾಜೆ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರ ಸಚಿವೆ

ಭತ್ತದ ಬೆಳೆಯ ತೆನೆ ಬರುವ ಅವಧಿಯಲ್ಲಿ ಪ್ರಕೃತಿಗೆ ಒಂದು ವಿಶೇಷ ಆರೋಗ್ಯಯುಕ್ತ ವಾತಾವರಣ ಇರುತ್ತದೆ. ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿಯಲ್ಲಿ ಇನ್ನೂ ಕೂಡಾ ಆಸಕ್ತಿ ಉಳಿಸಿಕೊಂಡಿದ್ದಾರೆ.ಬೈಂದೂರು ಭತ್ತದ ಬೆಳೆಗಾರರ ಒಕ್ಕೂಟಕ್ಕೆ ಅನುದಾನ ಪತ್ರ ವಿತರಿಸಿದ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವ

ಭೂಮಿಯನ್ನು ಹಡಿಲು ಬಿಡುವುದು ಪಾಪದ ಕೆಲಸ. ಪೂರ್ವಿಕರಿಂದ ಬಂದ ಭೂಮಿಯನ್ನು ಹಡಿಲು ಬಿಟ್ಟ ಮನೆಗಳಲ್ಲಿ ಇರುವವರ ಮನಸ್ಸು ಕೂಡಾ ಅಶಾಂತಿಯಿಂದ ಇರುತ್ತದೆ. ಕಳೆದ ವರ್ಷದಿಂದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಮಾಡಲಾದ ಹಡಿಲು ಭೂಮಿ ಕೃಷಿ ಆಂದೋಲನದಿಂದ ಯುವಕರಲ್ಲಿ ಕೃಷಿ ಆಸಕ್ತಿ ಹೆಚ್ಚಿದೆ.ಯಂತ್ರ ಶ್ರೀ ಮಾಹಿತಿ ಪತ್ರಬಿಡುಗಡೆ ಮಾಡಿದ ಉಡುಪಿ ಶಾಸಕ ಕೆ, ರಘುಪತಿ ಭಟ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂವಾರಿ ಡಾ ವೀರೇಂದ್ರ ಹೆಗ್ಗಡೆಯವರು ಯಾವೂದೇ ಕ್ಷೇತ್ರಕ್ಕೆ ಮಹತ್ವ ನೀಡಿದರೂ ಅದು ಯಶಸ್ಸು ಕಾಣುತ್ತದೆ. ಯಾಂತ್ರೀಕೃತ ಭತ್ತದ ಬೇಸಾಯ ನಾಡಿನ ಎಲ್ಲಾ ಭಾಗದಲ್ಲಿ ಯಶಸ್ಸು ಕಾಣಲಿದೆ.ನರ್ಸರಿ ಟ್ರೇ ವಿತರಣೆ ಮಾಡಿದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು

ರಾಜ್ಯೋತ್ಸವ ಕೃಷಿ ಪ್ರಶಸ್ತಿ ಪುರಸ್ಕೃತ ಬಾರಕೂರು ಶಾಂತಾರಾಮ್ ಶೆಟ್ಟಿ, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ದೇವಾಡಿಗ, ಕೂಡ್ಲಿ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ವೆಂಕಟರಮಣ ಉಡುಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ .ಕೆಂಪೇಗೌಡ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ಡಾ. ಎಲ್ ಎಚ್ ಮಂಜುನಾಥ್,


ಜನ ಜಾಗೃತಿ ವೇದಿಕೆ ಕುಂದಾಪುರ ಸ್ಥಾಪಕಾಧ್ಯಕ್ಷ ಬಿ.ಅಪ್ಪಣ್ಣ ಹೆಗ್ಡೆ, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್, ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್, ನವೀನ್ ಅಮೀನ್, ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್,  ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಶಿವರಾಯ ಪ್ರಭು, ರಂಗನಕೆರೆ ಬಾರಕೂರು, ಧ.ಗ್ರಾ ಯೋಜನೆಯ ಸಂಪತ್ ಸಾಮ್ರಾಜ್ಯ ಮೊದಲಾದವರು ಉಪಸ್ಥಿತರಿದ್ದರು.


ಯಂತ್ರಶ್ರೀ ಭತ್ತ ಬೇಸಾಯದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟಕ್ಕೆ ಧರ್ಮಸ್ಥಳದಿಂದ ರೂ.5 ಲಕ್ಷದ ಚೆಕ್ ವಿತರಿಸಲಾಯಿತು. 

Advertisement. Scroll to continue reading.

ಸಸಿಮಡಿ ತಯಾರಿಯಲ್ಲಿ ಸಾಧನೆ ಮಾಡಿದ ಶ್ರೀನಿವಾಸ ಉಡುಪ ಕೂಡ್ಲಿ, ಜಯಲಕ್ಷ್ಮೀ ಬಿ ಹೆಗ್ಡೆ ಹಿರಿಯಡಕ, ಸುಜಿತ್ ಕುಮಾರ್ ಹೆಗ್ಡೆ ಕಾಳಾವರ, ಕೃಷ್ಣ ನಾಯ್ಕ್ ಬೆಳ್ವೆ ಅವರನ್ನು ಗೌರವಿಸಲಾಯಿತು.


ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್.ಮಂಜುನಾಥ ಸ್ವಾಗತಿಸಿದರು. ಲತಾ ಮತ್ತು ಸಂಗಡಿಗರು ರೈತಗೀತೆ ಹಾಡಿದರು. ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ದಿನೇಶ ಶೇರೆಗಾರ್ ವಂದಿಸಿದರು.


ಇಲ್ಲಿನ ವೇದಿಕೆಯ ಬಳಿ ಆಧುನಿಕ ಕೃಷಿ ಸಲಕರಣೆಯ ಪ್ರದರ್ಶನ ಮತ್ತು ಉಳುಮೆಗೊಂಡ ಗದ್ದೆಯಲ್ಲಿ ಯಾಂತ್ರಿಕೃತ ನಾಟಿಯನ್ನು ಡಾ.ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಅತಿಥಿ ಗಣ್ಯರು ವೀಕ್ಷಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!