ಉಡುಪಿ : ಕರಾವಳಿಯಲ್ಲಿಯೂ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಉಡುಪಿ ಜಿಲ್ಲೆಯ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಕೋವಿಡ್ ನಿಯಮಾವಳಿಯಂತೆ ಸಂಕ್ರಮಣ ಉತ್ಸವ ನಡೆಯಿತು. ಸೇವಂತಿಗೆ ಪ್ರಿಯನಾದ ಬ್ರಹ್ಮಲಿಂಗೇಶ್ವರನಿಗೆ ಸಾವಿರಾರು ಭಕ್ತರು ಆಗಮಿಸಿ ಹಣ್ಣು ಕಾಯಿ ಅರ್ಪಿಸಿದರು.
ಗೆಂಡಸೇವೆಗೆ ಅವಕಾಶವಿಲ್ಲ :
ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗೆ ಒತ್ತು ನೀಡಲಾಗಿದ್ದು, ರಾತ್ರಿ ನಡೆಯುವ ಗೆಂಡಸೇವೆಗೆ ಭಕ್ತರಿಗೆ ಅವಕಾಶವಿಲ್ಲ. ಕೋವಿಡ್ ನಿಯಮಾವಳಿಯಂತೆ ಇತರ ಕೆಲವು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಭಕ್ತರ ಸಂಖ್ಯೆಯಲ್ಲಿ ಇಳಿಕೆ :
ಮಾರಣಕಟ್ಟೆಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಭಕ್ತರು ಊರು – ಪರವೂರಿನಿಂದ ಆಗಮಿಸುತ್ತಾರೆ. ಕೋವಿಡ್ 19 ಹಿನ್ನೆಲೆಯಲ್ಲಿ ಇಷ್ಟು ವರ್ಷಕ್ಕೆ ಹೋಲಿಸಿದರೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ.
ಅವಿಭಜಿತ ದ.ಕ ಜಿಲ್ಲೆ ಹಾಗೂ ಮಲೆನಾಡು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು. ಸಾಮಾಜಿಕ ಅಂತರದೊಂದಿಗೆ ನಡೆದ ಅನ್ನ ಸಂತರ್ಪಣೆ ನಡೆಯಿತು.
ವರದಿ : ದಿನೇಶ್ ರಾಯಪ್ಪನಮಠ