ಬರ್ಮಿಂಗ್ಹ್ಯಾಮ್: ಭಾರತ-ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ನಲ್ಲಿ ನಾಯಕ ಜಸ್ಪ್ರೀತ್ ಬುಮ್ರಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.
ಮೊಹಮ್ಮದ್ ಶಮಿ ವಿಕೆಟ್ ಪತನಗೊಳ್ಳುತ್ತಿದ್ದಂತೆ ಮೈದಾನಕ್ಕಿಳಿದ ಕ್ಯಾಪ್ಟನ್ ಬುಮ್ರಾ ಒಂದೇ ಓವರ್ ನಲ್ಲಿ 35ರನ್ ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ಎಸೆದ ಓವರ್ ಲ್ಲಿ 4 ಬೌಂಡರಿ, 2 ಸಿಕ್ಸರ್ ಸಮೇತವಾಗಿ 35ರನ್ ಸಿಡಿಸಿದರು. ಇದರಲ್ಲಿ ಒಂದು ವೈಡ್ ಫೋರ್ ಸಹ ಸೇರಿಕೊಂಡಿದೆ. ಬುಮ್ರಾ ಒಂದೇ ಓವರ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಈ ಮೂಲಕ ವೆಸ್ಟ್ ಇಂಡೀಸ್ ನ ಶ್ರೇಷ್ಟ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ದಾಖಲೆ ಮುರಿದಿದ್ದಾರೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾ ಒಂದೇ ಓವರ್ ನಲ್ಲಿ 35 ರನ್ ಸಿಡಿಸಿದ್ದು, ಇಷ್ಟೊಂದು ರನ್ ಗಳಿಸಿರುವ ಮೊದಲ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಹಿಂದೆ 2003ರಲ್ಲಿ ಬ್ರೇನ್ ಲಾರಾ ಒಂದೇ ಓವರ್ ನಲ್ಲಿ 28 ರನ್ ಮಾಡಿದ್ದರು. ಇದರ ಜೊತೆಗೆ 2013ರಲ್ಲಿ ಜಾರ್ಜ್ ಬೈಲಿ ಹಾಗೂ 2020ರಲ್ಲಿ ಕೇಶವ್ ಮಹಾರಾಜ್ ಒಂದೇ ಓವರ್ ನಲ್ಲಿ 28 ರನ್ ಸಿಡಿಸಿದ್ದರು.