ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ದತ್ತಾಶ್ರಮ ಆದಿಶಕ್ತಿ ಮಠ, ಚಾರಿಟೇಬಲ್ ಟ್ರಸ್ಟ್ ಆನಗಳ್ಳಿ ಗೆಳೆಯರ ಬಳಗ (ರಿ) ಆನಗಳ್ಳಿ ರಿಜಾಯ್ಸ್ ಇಂವೆನ್ಟ್ ಗ್ರೂಪ್ ಆನಗಳ್ಳಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ,ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ (ರಿ) ಕುಂದಾಪುರ ಇವರ ಸಹಕಾರದಲ್ಲಿ ಇಂದು ಗೆಳೆಯರ ಬಳಗ ಕಲಾಮಂದಿರ ಆನಗಳ್ಳಿ ಕುಂದಾಪುರ ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು ಕರ್ನಾಟಕ ಸರಕಾರ ಇವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ದಾನ ಎಲ್ಲವು ಶ್ರೇಷ್ಠ ದಾನ ಅದರಲ್ಲೂ ರಕ್ತದಾನ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ದಾನ ಹಾಗೂ ನಾವು ಕೊಟ್ಟ ರಕ್ತ ಯಾರಿಗೆ ಯಾವ ಧರ್ಮದ ರೋಗಿ ಕೊಡಲಾಗುತ್ತದೆ ಎಂದು ತಿಳಿಯದು ಹಾಗೇಯ ರಕ್ತವನ್ನು ಪಡೆದ ರೋಗಿಗೂ ಯಾರ ರಕ್ತ ಹಾಗೂ ಯಾವ ಧರ್ಮದವರ ರಕ್ತ ಎಂದು ಗೊತ್ತಿರುವುದಿಲ್ಲ. ಹಾಗಾಗೀ ದಾನಗಳಲ್ಲಿ ರಕ್ತದಾನ ಸರ್ವಶ್ರೇಷ್ಠ ದಾನಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಅಧ್ಯಕ್ಷತೆಯನ್ನುbದತ್ರಾಶ್ರಮ ಆದಿಶಕ್ತಿ ಮಠ, ಚಾರಿಟೇಬಲ್ ಟ್ರಸ್ಟ್ ಆನಗಳ್ಳಿಯ ಫೆರ್ಮಿನಾ ಸುಭಾಷ್ ಪೂಜಾರಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇದರ ಸಭಾಪತಿ ಜಯಕರ್ ಶೆಟ್ಟಿ, ಆದರ್ಶ ಆಸ್ಪತ್ರೆ ಕುಂದಾಪುರದ
ಡಾ. ಆದರ್ಶ್ ಹೆಬ್ಬಾರ್ , ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರಿನ ಪ್ರಬಂಧಕ ಮನೋಜ್ ಪುತ್ರನ್, ಕುಂದಾಪುರ
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಭಾಸ್ಕರ್ ಬಿಲ್ಲವ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದ ವೈದ್ಯ ಡಾ.ಮಹಮ್ಮದ್ ಆಜೀಜ್,
ಗೆಳೆಯರ ಬಳಗ (ರಿ) ಆನಗಳ್ಳಿಯ ಅಧ್ಯಕ್ಷ ಉಮೇಶ್ ಕಾಂಚನ್ ,ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್,ಅಧ್ಯಕರು ಅಭಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಉಪಸ್ಥಿತ್ತರಿದ್ದರು.
ಈ ಸಂದರ್ಭದಲ್ಲಿ ರಕ್ತದಾನ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಡಾ.ಸೊನಿಯ ,ಪ್ರಶಾಂತ್ ತಲ್ಲೂರು, ಸುಕೇಶ್ ಖಾರ್ವಿ, ರಾಘವೇಂದ್ರ ಸುಜಯ ಇವರನ್ನು ಸನ್ಮಾನಿಸಲಾಯಿತು.
ಗಣೇಶ್ ಕಾಂಚನ್ ಸ್ವಾಗತಿಸಿದರು. ನಾಗರಾಜ್ ಭಟ್ಕಳ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ಧನ್ಯವಾದ ಅರ್ಪಿಸಿದರು.
ಶರತ್ ಕಾಂಚನ್ ನೇತೃತ್ವದಲ್ಲಿ ನಡೆದ ಈ ರಕ್ತದಾನ ಶಿಬಿರದಲ್ಲಿ 230 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಕೊರೊನ ನಂತರದಲ್ಲಿ ದಾಖಲೆಯ ರಕ್ತದಾನ ಶಿಬಿರ ಎಂಬ ಹೆಗ್ಗಳ್ಳಿಕೆಗೆ ಸಾಕ್ಷೀಯಾಯಿತು.