ಉಡುಪಿ : ಬೆಳ್ಳಂಪಳ್ಳೀಯ ನಡುಮನೆ ದಿವಾಕರ ಶೆಟ್ಟಿಯವರ ಬೆಟ್ಟು ಗದ್ದೆಯಲ್ಲಿ ಮಳೆ ನೀರು ತುಂಬಿದರೂ ಕ್ಷಣಾರ್ಧದಲ್ಲಿ ನೀರು ಖಾಲಿಯಾಗುತ್ತದೆ. ಮಳೆ ನೀರು ತುಂಬಿದ ಕ್ಷಣಾರ್ಧದಲ್ಲಿ ನೀರು ಗದ್ದೆಯಲ್ಲಿ ಮಾಯವಾದಂತೆ ಗೋಚರಿಸುತ್ತದೆ. ಕಳೆದ ವರ್ಷ ಬೆಳ್ಳಂಪಳ್ಳಿ ಭೂತರಾಜ ಸನ್ನಿಧಿಯ ಕಾಂಕ್ರೀಟ್ ರಸ್ತೆಯ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಕಲ್ಲು ಚಪ್ಪಡಿ ಕುಸಿದುಆ ಭಾಗದಲ್ಲಿ ಗುಹಾಸಮಾಧಿ ಪತ್ತೆಯಾಗಿತ್ತು.
ಅನತಿ ದೂರದಲ್ಲಿ ದಿವಾಕರ ಶೆಟ್ಟಿ ಅವರ ಮನೆ ಇದೆ. ಮನೆಯ ಪಕ್ಕದಲ್ಲಿ ನಾಗಬನ ಇದೆ. ಮನೆಯ ಪಕ್ಕದಲ್ಲಿಯೇ ಬೆಟ್ಟುಗದ್ದೆ ಇದ್ದು, ಕಳೆದ ವರ್ಷ ಉಳುಮೆ ಮಾಡುವಾಗ.. ನೀರು ಯಥೇಚ್ಛವಾಗಿ ಇಂಗುತ್ತಿದ್ದನ್ನು ಗಮನಿಸಿದ ದಿವಾಕರ್ ಶೆಟ್ಟಿ ಹಂಚು ಮತ್ತು ಗದ್ದೆಯ ಮಣ್ಣನ್ನು ಸುತ್ತಲೂ ಸುತ್ತುವರಿದು ತಮ್ಮ ಗದ್ದೆಯಲ್ಲಿ ನೀರು ಒಳಮಯೈ ಹರಿಯದಂತೆ ಮಾಡಿದ್ದಾರೆ.
ಇದೀಗ ಈ ಬಾರಿಯೂ ಕೃಷಿ ಚಟುವಟಿಕೆಗೆ ಸಿದ್ದರಾದಾಗ
ಬೆಟ್ಟುಗದ್ದೆಯಲ್ಲಿ ಕೃಷಿ ಮಾಡಲು ನೀರನ್ನು ತಡೆಹಿಡಿಯಲು ಹಂಚನ್ನು ಇಟ್ಟು ಮಣ್ಣು ಬೆರೆಸಿದ್ದಾರೆ. ನೀರು ನಿಲ್ಲುವಂತೆ ಮಾಡಿದ್ದಾರೆ. ಈ ಬಾರಿಯೂ ಕಟ್ಟೆ ತೆಗೆದರೆ ಯಥೇಚ್ಛವಾಗಿ ನೀರು ಒಳಮೈ ಪ್ರವೇಶಿಸುತ್ತದೆ. ಒಳಮೈ ಹೋದ ನೀರು ಗೋಚರಿಸುವುದಿಲ್ಲ. ಇಲ್ಲಿಯೂ ಸಹ ಗುಹಾಸಮಾಧಿ ಇರುವ ಲಕ್ಷಣಗಳು ಕಂಡುಬಂದಿದೆ. ಅನತಿ ದೂರದ ಕೆಳ ಪ್ರದೇಶದಲ್ಲಿರುವ ಗದ್ದೆಗಳಿಗೆ ಭೇಟಿ
ನೀಡಿದರೆ, ಈ ಬೆಟ್ಟು ಗದ್ದೆಯ ಕೆಸರು ನೀರು ಹರಿಯುವುದನ್ನು ಕಳೆದ ವರ್ಷ
ಗಮನಿಸಿದ್ದಾರೆ ಎಂದು ದಿವಾಕರ್ ಶೆಟ್ಟಿ ತಿಳಿಸಿದ್ದಾರೆ.
ಬೆಳ್ಳಂಪಳ್ಳಿ ಭೂತರಾಜನ ಸಾನಿಧ್ಯದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಬೆಳ್ಳಂಪಳ್ಳಿ ಅವರು ಮಾಹಿತಿ ನೀಡಿದಾಗ ಸ್ಥಳಕ್ಕೆ ಭೇಟಿ ನೀಡಿದ ಸಾಮಾಜಿಕ ಕಾರ್ಯಕರ್ತ ಗಣೇಶ ರಾಜ್ ಸರಳೇಬೆಟ್ಟು, ರಾಜೇಶ್ ಪ್ರಭು ಪರ್ಕಳ ಜೊತೆಗಿದ್ದು ಪರಿಶೀಲಿಸಿ ಮಳೆಯ ನೀರು ಸರಾಗವಾಗಿ ಒಳಮೈ ಹರಿಯುವುದನ್ನು ಗಮನಿಸಿದ್ದಾರೆ.
ಈ ಸಂದರ್ಭದಲ್ಲಿ ದಿವಾಕರ್ ಶೆಟ್ಟಿ. ಪತ್ನಿ ಆಶಾಲತಾ ಡಿ.ಶೆಟ್ಟಿ, ಬೆಳ್ಳಂಪಳ್ಳಿ ಹೊಸ ಒಕ್ಕಲು ಮನೆ ಉಷಾ ಕುಂದರ್ ಜೊತೆಗಿದ್ದು ಸಹಕರಿಸಿದರು.