ಮಕರ ಸಂಕ್ರಾಂತಿ ಪೂಜೆ ವೇಳೆ ದೇಗುಲದಲ್ಲಿ ಸರ್ಪ ಪ್ರತ್ಯಕ್ಷ; ತನ್ಮಯರಾದರು ಭಕ್ತರು
Published
0
ಬ್ರಹ್ಮಾವರ : ಪುರಾಣ ಪ್ರಸಿದ್ಧ ಬಾರಕೂರಿನ ಪ್ರಧಾನ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ ಸುತ್ತು ಬಲಿ ನಡೆಯಿತು. ಈ ಸಂದರ್ಭದಲ್ಲಿ ಹಾಗೂ ದೇವಾಲಯದ ಒಳಭಾಗದ ಪೌಳಿ ಯಲ್ಲಿರುವ ಶ್ರೀ ಕುಮಾರ ಸ್ವಾಮಿ ಮೂರ್ತಿಯ ಮೇಲೆ ಹಾಗೂ ಹೊರ ಸುತ್ತು ಬಲಿಯ ಸಂದರ್ಭದಲ್ಲಿಯೂ ಗೋಡೆಯ ಮೇಲೆ ಒಂದು ಸರ್ಪ ಗೋಚರಿಸಿ ಭಕ್ತರನ್ನು ತನ್ಮಯ ಗೊಳಿಸಿತು.