ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಗದ್ದೆ ಕೆಲಸ ಮಾಡುವಾಗ ಕುಸಿದು ಬಿದ್ದ ಯುವಕ ಎದೆನೋವಿನಿಂದ ಸಾವನ್ನಪ್ಪಿರುವ ಘಟನೆ ಬೇಳಂಜೆ ಗ್ರಾಮದ ಕೆಪ್ಪೆಕೆರೆಯ ಈಶ್ವರ ನಗರದಲ್ಲಿ ನಡೆದಿದೆ.
ಕೃಷ್ಣ ನಾಯ್ಕ್ ( 26 ವರ್ಷ) ಯುವಕ. ಕೃಷ್ಜ ನಾಯ್ಕ್ ನಿನ್ನೆ ದಿನ ಸಂಜೆ ತಮ್ಮ ಮನೆಯ ಬಳಿವಿರುವ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿರುವಾಗ ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಬಳಿಕ ಮನೆಗೆ ತಂದು ಅರೈಕೆ ಮಾಡಿದ್ದು, ಅವರಿಗೆ ರಾತ್ರಿ ಸಮಯ ವಿಪರೀತ ಎದೆನೋವು ಜಾಸ್ತಿಯಾಗಿದೆ. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಅಸ್ಪತ್ರೆಗೆ ಕರೆ ತರಲಾಯಿತಾದರೂ ಅವರು ದಾರಿ ಮದ್ಯೆ ಮೃತ ಪಟ್ಟಿದ್ದಾರೆ.
Advertisement. Scroll to continue reading.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.