Connect with us

Hi, what are you looking for?

ರಾಷ್ಟ್ರೀಯ

ತೆರೆದ ಮ್ಯಾನ್‌ಹೋಲ್‌ಗೆ ಅಡ್ಡಲಾಗಿ ಬಿದ್ದಿದ್ದ ಬ್ಯಾರಿಕೇಡ್ ಸರಿಪಡಿಸುತ್ತಿದ್ದಾಗ ಕಾರು ಹರಿದು ವ್ಯಕ್ತಿ ಸಾವು

0

ಹೈದರಾಬಾದ್ : ತೆರೆದ ಮ್ಯಾನ್‌ಹೋಲ್‌ಗೆ ಅಡ್ಡಲಾಗಿ ಬಿದ್ದಿದ್ದ ಬ್ಯಾರಿಕೇಡ್ ಅನ್ನು ಸರಿಪಡಿಸಲು ಮುಂದಾದ ವ್ಯಕ್ತಿಯ ಮೇಲೆ ಕಾರು ಹರಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಚಾದರ್‌ಘಾಟ್‌ನಲ್ಲಿ ನಡೆದಿದೆ.

ಜಾಹೇದ್ ಮೃತಪಟ್ಟವರು. ಜಾಹೇದ್ ಮಲಕಪೇಟೆಯ ಸೊಹೈಲ್ ಹೋಟೆಲ್ ಉದ್ಯೋಗಿಯಾಗಿದ್ದಾರೆ. ಮಂಗಳವಾರ ರಾತ್ರಿ ಜಾಹೇದ್ ಚಾದರ್‌ಘಾಟ್ ರಸ್ತೆಯಲ್ಲಿ ಅಪಾಯಕಾರಿ ಮ್ಯಾನ್‌ಹೋಲ್‌ನ ಮುಂದೆ ಹಾಕಲಾಗಿದ್ದ ಎಚ್ಚರಿಕೆಯ ಬ್ಯಾರಿಕೇಡ್ ಅನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.

ತಕ್ಷಣವೇ ಅವರನ್ನು ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ

Advertisement. Scroll to continue reading.

ಈ ಬಗ್ಗೆ ಪೊಲೀಸರು ಸೆಕ್ಷನ್ 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಕಾರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!