ಒಡಿಶಾ : ಕಟ್ಟಿಕೊಂಡ ಹೆಂಡತಿ ಶಿರಚ್ಛೇದ ಮಾಡಿರುವ ಗಂಡ, ಆಕೆಯ ರುಂಡದೊಂದಿಗೆ ಸುಮಾರು 12 ಕಿಲೋ ಮೀಟರ್ ನಡೆದುಕೊಂಡು ಪೊಲೀಸ್ ಠಾಣೆಗೆ ಬಂದಿರುವ ಘಟನೆ ಧೆಂಕನಕಲ್ ಪ್ರದೇಶದಲ್ಲಿ ನಡೆದಿದೆ.
ವ್ಯಕ್ತಿಯು ತುಂಡರಿಸಿದ ತಲೆಯನ್ನು ಹಿಡಿದು ಸಮೀಪದ ಪೊಲೀಸ್ ಠಾಣೆಗೆ ತೆರಳುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶುಚಲಾ ಮಾಝಿ ಮೃತ ಪತ್ನಿ. ಆಕೆ ತನಗೆ ವಿಶ್ವಾಸದ್ರೋಹ ಮಾಡಿದ್ದಾಳೆಂದು ಶಂಕಿಸಿ, ಅವಳ ಶಿರಚ್ಛೇದ ಮಾಡಿದ್ದಾನೆ ಎನ್ನಲಾಗಿದೆ.
Advertisement. Scroll to continue reading.
ಆತ ರಸ್ತೆಯಲ್ಲಿ ತುಂಡರಿಸಿದ ತಲೆಯನ್ನು ಕೊಂಡೊಯ್ಯುತ್ತಿದ್ದ ವೇಳೆ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.