ಕೊಡುಗು : ರಾಜ್ಯದ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ಕೊಡಗಿನಲ್ಲಿ ಮಹಾ ಮಳೆಗೆ ಮೊದಲ ಬಲಿಯಾಗಿದೆ. ಜುಲೈ 5ರಂದು ಗೋಡೆ ಕುಸಿದು ಗಾಯಗೊಂಡಿದ್ದ ವೃದ್ಧೆ ಇಂದು ಸಾವನ್ನಪ್ಪಿದ್ದಾರೆ.
ಸೋಮವಾರ ಪೇಟೆ ತಾಲೂಕಿನ ಸುಳುಗಳಲೆ ಗ್ರಾಮದ ವಸಂತಮ್ಮ ಮೃತಪಟ್ಟ ವೃದ್ಧೆ. ಜುಲೈ 5ರಂದು ಭಾರೀ ಮಳೆಯ ಆರ್ಭಟಕ್ಕೆ ಮನೆಯ ಗೋಡೆ ಕುಸಿದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Advertisement. Scroll to continue reading.