ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಶವಯಾತ್ರೆ ವೇಳೆ ಲಾಠಿ ಚಾರ್ಜ್ ಮಾಡಿದ ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಮತ್ತು ಸುಬ್ರಹ್ಮಣ್ಯ ಠಾಣೆಯ ಪಿಎಸ್ಸೈಗಳನ್ನು ವರ್ಗಾವಣೆ ಮಾಡಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಆದೇಶ ಇಂದು ಆದೇಶ ಹೊರಡಿಸಿದ್ದಾರೆ.
ವರ್ಗಾವಣೆಯಾದ ಪಿಎಸ್ಸೈಗಳಿಗೆ ಜಾಗ ತೋರಿಸದೇ ಮಂಗಳೂರು ಐಜಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
Advertisement. Scroll to continue reading.
ಬೆಳ್ಳಾರೆಗೆ ನೂತನ ಪಿಎಸೈ ಆಗಿ ಕುಂದಾಪುರ ಠಾಣೆಯ ಸುಹಾಸ್ ಹಾಗೂ ವಿಟ್ಲ ಠಾಣಾ ಪಿಎಸ್‌ಐ ಆಗಿದ್ದ ಮಂಜುನಾಥ್ ಅವರನ್ನು ಸುಬ್ರಹ್ಮಣ್ಯ ಠಾಣೆಗೆ ನೇಮಕ ಮಾಡಲಾಗಿದೆ.