ಗಂಗೊಳ್ಳಿ : ಮೀನು ಹಿಡಿಯುತ್ತಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೈಂದೂರು ತಾಲೂಕು ಹಡವು ಗ್ರಾಮದಲ್ಲಿ ನಡೆದಿದೆ.
ನಾರಾಯಣ ದೇವಾಡಿಗ (55) ಮೃತಪಟ್ಟವರು. ಅವರು ಸೋಮವಾರ ಸಂಜೆ ಅತ್ತಿಕೋಣೆ ಸೌಪರ್ಣಿಕ ಹೊಳೆಯಲ್ಲಿ ತೀರದಲ್ಲಿ ಬಲೆ ಹಾಕುತ್ತಿದ್ದಾಗ ನದಿಯ ದಡದಿಂದ ಆಕಸ್ಮಿಕವಾಗಿ ಕಾಲು ಜಾರಿ ನದಿಯ ನೀರಿಗೆ ಬಿದ್ದಿದ್ದು ನೀರು ರಭಸವಾಗಿ ಹರಿಯುತ್ತಿದ್ದುದರಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಅವರ ಮೃತದೇಹವು ಸೇನಾಪುರ ಗ್ರಾಮದ ಬಂಟ್ವಾಡಿ ಸಮೀಪದ ಸೌಪರ್ಣಿಕ ನದಿಯಲ್ಲಿ ಬುಧವಾರ ಮೃತದೇಹವು ಪತ್ತೆಯಾಗಿದೆ.
Advertisement. Scroll to continue reading.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.