ಉಡುಪಿ : ಉಡುಪಿಯ ಕಾಂಗ್ರೆಸ್ ಮುಖಂಡ ಕೃಷ್ಣ ಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ಅವರ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯರವರ ಹುಟ್ಟು ಹಬ್ಬದ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡರು. ಈ ವೇಳೆ ಸುಮಾರು ಹತ್ತು ಕಿಲೋಮೀಟರ್‌ನಷ್ಟು ದಾರಿಯುದ್ದಕ್ಕೂ , ಹುಲಿವೇಷ ತಂಡವು ಮೆರವಣಿಗೆ ಸಾಗುವಾಗ ‘ಹೌದು ಹುಲಿಯಾ’ ಎಂಬ ಎಂಬ ಎಲ್ಲರ ಬಾಯಿಮಾತು ಹುಲಿವೇಷ ಕುಣಿತ ಕಂಡಾಗ ಕೇಳಿಬರುತ್ತಿತ್ತು. ವರುಷದ ಹಿಂದೆಯೇ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಾ ಇದ್ದ ಸಂದರ್ಭದಲ್ಲಿ ಕಾರ್ಯಕರ್ತನೋರ್ವ ‘ಹೌದು ಹುಲಿಯಾ’ ಎಂದು ಕೂಗಿದಾಗ ಸಿದ್ದರಾಮಯ್ಯರವರು ಅವರದೇ ಶೈಲಿಯಲ್ಲಿ ಕಾರ್ಯಕರ್ತನನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ಸಿದ್ದು ಅವರ ಅಭಿಮಾನದಿಂಲೇ ಏರು ಧ್ವನಿಯಿಂದ ಹೌದು ಹುಲಿಯ ಎಂಬ ಕಾರ್ಯಕರ್ತ ಕೂಗಿದ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿ, ಆ ಪದ ಜನಜನಿತವಾಗಿದೆ.
ಉಡುಪಿಯ ಹುಲಿವೇಷದಾರನ ಹೊಟ್ಟೆಯ ಭಾಗದಲ್ಲಿ ಕಲಾವಿದನ ಕೈಚಳಕದಲ್ಲಿ ಮೂಡಿಬಂದ ಸಿದ್ದು ಭಾವಚಿತ್ರ ಎಲ್ಲರ ಗಮನ ಸೆಳೆಯಿತು. ಎಲ್ಲರೂ ಸೈಲ್ಫಿ ಜೊತೆಗೆ ಹೌದು ಹುಲಿಯ ಎಂಬ ಮಾತು ಜೊರಾಗಿ ಕೂಗುತ್ತಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಚರಣ್ ಬಂಗೇರ ಸೌರಬ್ ಬಳ್ಳಾಲ್, ಸಂದೇಶ್ ಶೆಟ್ಟಿ, ಗುರುಪ್ರಸಾದ್, ಮಹೇಶ್ ಸುವರ್ಣ ಮಲ್ಪೆ, ಕಾಂಗ್ರೆಸ್‌ನ ಹಿರಿಯ ಮುಖಂಡ ಜಯಶೆಟ್ಟಿ ಬನ್ನಂಜೆ, ಗಣೇಶ್ ರಾಜ್ ಸರಳೇಬೆಟ್ಟು, ರಾಜೇಶ್ ಪ್ರಭು ಪರ್ಕಳ ಮೊದಲಾದರು ಜೊತೆಗಿದ್ದರು.