Connect with us

Hi, what are you looking for?

Diksoochi News

ರಾಜ್ಯ

ಆಷಾಢಕ್ಕೆ ತವರಿಗೆ ಬಂದು ಪ್ರಿಯಕರನೊಂದಿಗೆ ಪರಾರಿಯಾದ ನವವಧು ಆತ್ಮಹತ್ಯೆ

2

ಮೈಸೂರು : ಆಷಾಢಕ್ಕೆ ತವರಿಗೆ ಬಂದು ಯುವತಿ ಪ್ರಿಯಕರನ ಜೊತೆಗೆ ಓಡಿ ಹೋದ ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕು ರಾಂಪುರ ಗ್ರಾಮದಲ್ಲಿ ನಡೆದಿದೆ.

ವರ್ಷಿತಾ(20) ಮೃತ ಯುವತಿ. ವರ್ಷಿತಾ ಮದುವೆಗೂ ಮುನ್ನ ತನ್ನ ಮನೆ ಪಕ್ಕದಲ್ಲಿದ್ದ ಹುಡುಗನ ಜೊತೆಗೆ ಪ್ರೇಮ ಶುರುವಾಗಿತ್ತಂತೆ. ಆದರೆ ಮನೆಯವರು ಒಪ್ಪದೇ ಆಕೆಯನ್ನು , ಚಾಮರಾಜ‌ನಗರ ಮೂಲದ ಯುವಕನ‌ ಜತೆ ಮದುವೆ ಮೇ 8 ರಂದು ಅದ್ದೂರಿಯಾಗಿ ಮದುವೆ ಮಾಡಿದ್ದರು.

ಆಷಾಢ ಮಾಸದ ಹಿನ್ನೆಲೆ ಕಳೆದ ತಿಂಗಳು ತವರು ಮನೆಗೆ ಬಂದಿದ್ದ ಆಕೆ, ಪ್ರಿಯಕರನ ಜತೆ ಪರಾರಿಯಾಗಿದ್ದಳು. ಈ ಬಗ್ಗೆ ಹುಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನಲ್ಲಿ ಆಕೆ ಪ್ರಿಯಕರನೊಂದಿಗೆ ಪತ್ತೆಯಾಗಿದ್ದಳು. ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ಆಕೆಯನ್ನು ಅವಳ ತಾತನ ಮನೆಗೆ ಕಳಿಸಿದ್ದರು ಎನ್ನಲಾಗಿದೆ.

Advertisement. Scroll to continue reading.

ಆದರೆ ಪ್ರಿಯಕರನಿಂದ ಬೇರೆ ಮಾಡಿದಕ್ಕೆ ಮನನೊಂದು ಆಕೆ ತಾತನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಈ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!