ಲೇಖಕ : ವಿನೋದ್ ಶೆಟ್ಟಿ
ತುಳುನಾಡಿನ ಪರಶುರಾಮ ಸೃಷ್ಟಿಯಲ್ಲಿ ಬಹಳ ಇತಿಹಾಸ ಇರುವ ಸ್ಥಳವಾದ ಆದಿ ಉಡುಪಿ
ಕೊಡವೂರು ಸಿರಿ ಕಂಬಳ ಮನೆಗೆ ಬಂದ ಕುರುಹು. ನಮ್ಮ ಹಿರಿಯರು ನಮಗೆ ತಿಳಿಸಿದಂತೆ
ಸಿರಿ ತನ ಗಂಡನ ಮನೆಯ ಸಂಬಂಧವನ್ನು ಕಡಿದುಕೊಂಡು ತನ್ನ ಮಗ ಕುಮಾರ ಹಾಗೂ ತನ್ನ ಕೆಲಸದಾಕೆ ದಾರು ವಿನೊಂದಿಗೆ ಹೊರಟು ಬರುತ್ತಾಳೆ. ಮಗ ಕುಮಾರನ ಪ್ರಸವ ವದ ವೇಳೆ ಗಂಡನ ಊರಿನ ಗ್ರಾಮ ದೇವರಿಗೆ ಹರಕೆಯನ್ನು ಹೊತ್ತಿರುತ್ತಾಳೆ. ತನ್ನ ಮಗುವಿನ ಕೈಯಲ್ಲಿ ಮುಷ್ಟಿ ಕಾಣಿಕೆಯನ್ನು ಹಾಕುತ್ತೇನೆಂದು ದೇವಸ್ಥಾನಕ್ಕೆ ಹೋಗುವಾಗ ಪೂಜೆ ಮಾಡುವ ಬ್ರಾಹ್ಮಣರು ಪೂಜೆ ಮುಗಿಸಿ ಹೊರಡಲು ತಯಾರಿ ನಡೆಸಿದರು. ಕಾರಣ ಸಿರಿಯ ಗಂಡ ಬ್ರಾಹ್ಮಣರಿಗೆ ಹೇಳಿದರು. ಅವಳ ಪೂಜೆಯನ್ನು ಮಾಡಬಾರದು ಎಂದು ಸಿರಿ ಬ್ರಾಹ್ಮಣರಲ್ಲಿ ಎಷ್ಟು ಬೇಡಿಕೊಂಡರೂ ಅವರು ಪೂಜೆ ಮಾಡುವುದಿಲ್ಲ ಎಂದರು ಸಿರಿಯು ಒಬ್ಬಳು ದೈವೀಶಕ್ತಿ ಎಂಬುದು ಬ್ರಾಹ್ಮಣರಿಗೆ ತಿಳಿದಿರಲಿಲ್ಲ. ಅವಳು ದೇವರ ಎದುರಲ್ಲಿ ಭಕ್ತಿಯಿಂದ ಕೈಮುಗಿದು ನಿಂತಾಗ ದೇವಸ್ಥಾನದ ಬಾಗಿಲು ತನ್ನಿಂದಾಗಿಯೇ ತೆರೆದು ದೇವರ ದರ್ಶನವಾಯಿತು. ಅವಳು ಮಗನ ಕೈಯಲ್ಲಿ ಮುಷ್ಟಿ ಕಾಣಿಕೆಯನ್ನು ಹಾಕಿಸಿದಳು. ಇದನ್ನು ನೋಡಿದ ಬ್ರಾಹ್ಮಣರಿಗೆ ಆಶ್ಚರ್ಯವಾಯಿತು. ಅಮ್ಮ ನೀನು ಯಾರೆಂದು ನನಗೆ ತಿಳಿಯದು ನಿನ್ನ ಗಂಡ ಪೂಜೆ ಮಾಡಬಾರದೆಂದು ಹೇಳಿದ್ದರು. ಅದಕ್ಕಾಗಿ ನಾನು ಹೀಗೆ ಮಾಡಬೇಕಾಯಿತು ಎಂದು ಅಂಗಲಾಚಿ ಬೇಡಿಕೊಂಡರೂ, ದೇವಸ್ಥಾನದ ಪೂಜೆ ಮಾಡಿ ನನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ.
ನನಗೆ ಬೇರೆ ದಾರಿಯಿಲ್ಲ. ನನ್ನನ್ನು ಕ್ಷಮಿಸಿ ಬೇಡಿಕೊಂಡರು. ಅಲ್ಲಿಂದ ಮುಂದೆ ಬಂದು ಮಾಬು ಕಳ ಹೊಳೆಯನ್ನು ದಾಟಬೇಕು ಹೊಳೆ ದಾಟಲು ಬರುವಾಗ ದೋಣಿ ಯವನು ಇನ್ನೊಂದು ಬದಿಗೆ ದೋಣಿಯನ್ನು ತೆಗೆದುಕೊಂಡು ಹೋಗಿದ್ದ. ನಮಗೆ ಹೊಳೆ ದಾಟಬೇಕು ನೀನು ದೋಣಿಯನ್ನು ಈ ಕಡೆಗೆ ತೆಗೆದುಕೊಂಡು ಬಾ ಎಂದು ಹೇಳಿದಾಗ ನನಗೆ ಕತ್ತಲಾಗುತ್ತಾ ಬಂತು ನಾನು ಇನ್ನೂ ಆ ಕಡೆಗೆ ಬರುವುದಿಲ್ಲ. ನೀವು ನಾಳೆ ಬನ್ನಿ ಎಂದು ಹೇಳುತ್ತಾನೆ. ಆಗುವುದಿಲ್ಲ ನಮಗೆ ಇಂದೇ ಹೋಗಬೇಕು. ನೀನು ಬಾ ಎಂದರೆ ದೋಣಿಯನ್ನು ಬರಲೇ ಇಲ್ಲ. ಕೊನೆಗೆ ಸಿರಿ ಹೊಳೆಯಲ್ಲಿ ನಿಂತು ಗಂಗಾ ದೇವಿಯಲ್ಲಿ ಪ್ರಾರ್ಥನೆ ಮಾಡಿದಾಗ ಆಚೆ ನೀರು ಆ ಕಡೆಗೆ ಈ ಕಡೆ ನೀರು ಈ ಕಡೆಗೆ ಮಧ್ಯ ದಾರಿಯಾಯಿತು. ಅದರಲ್ಲಿ ನಡೆದುಕೊಂಡು ಬಂದು ಹೊಳೆ ದಾಟಿದರು. ಇದನ್ನು ನೋಡಿದ ಅಂಬಿಗನಿಗೆ ಜೀವವೇ ಹೋದಂತಾಯಿತು.
ಅಮ್ಮ ನನ್ನ ಜೀವನದ ದಾರಿ ಇದು. ನಾನು ಮಾಡಿದ್ದು ತಪ್ಪಾಯ್ತು ನಿಮ್ಮ ಗಂಡ ಹೇಳಿದ ಮಾತನ್ನು ಕೇಳಿ ನಾನು ಈ ರೀತಿ ಮಾಡಬೇಕಾಯಿತು. ನನ್ನನು ಕ್ಷಮಿಸಿ ಇಂದು ಬೇಡಿ ಕೊಂಡ ಅದಕ್ಕೆ ಸಿರಿ ನೀನು ಮಾಡಿದ ತಪ್ಪಿಗೆ ಈ ಹೊಳೆಯಲ್ಲಿ ನೀರು ಆರು ತಿಂಗಳು ತುಂಬಿ ಹರಿಯಲಿ ಆರು ತಿಂಗಳು ಬತ್ತಿಹೋಗಲಿ ಎಂದು ಶಾಪ ಕೊಟ್ಟು ಅಲ್ಲಿಂದ ಮುಂದೆ ಬಂದು ಕಲ್ಯಾಣಪುರಕ್ಕೆ ಬರುತ್ತಾಳೆ. ಅಲ್ಲಿಗೆ ಬರುವಾಗ ರಾತ್ರಿಯಾಗಿತ್ತು ಅಲ್ಲಿ ಒಂದು ಮನೆಯಲ್ಲಿ ಒಬ್ಬರು ಅಜ್ಜಿ ಇರುತ್ತಾರೆ. ಅವರಲ್ಲಿ ನಾವು ಈ ರಾತ್ರಿ ಈ ಮನೆಯಲ್ಲಿ ಇರುತ್ತೇವೆ ಎಂದು ಕೇಳಿದಾಗ ನೀವು ಊಟ ಮಾಡಿಕೊಂಡು ಹೋಗಿ ಇಲ್ಲಿರುವುದು ಬೇಡ ಎಂದು ಹೇಳುತ್ತಾರೆ.
ಆಗ ಸಿರಿ ಯಾಕೆ ಎಂದು ಕೇಳಿದಾಗ ನನಗೊಬ್ಬ ಮಗನಿದ್ದಾನೆ. ಅವನು ವ್ಯಭಿಚಾರಿ. ನಿನ್ನನ್ನು ನೋಡಿದರೆ ಬಿಡುವುದಿಲ್ಲ ಎಂದಾಗ, ಅಜ್ಜಿ, ನಮಗೆ ಇಲ್ಲಿರಲು ಅವಕಾಶ ಕೊಡಿ ಅವನನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಅಲ್ಲಿ ರಾತ್ರಿ ಮಲಗಿ ಬೆಳಿಗ್ಗೆ ಬೇಗ ಎದ್ದು ಬರುತ್ತಾ ಬಂದವರು ಕೊಡವೂರು ಕಂಬಳ ಮನೆಯನ್ನು ಸೇರುತ್ತಾರೆ.
ಅಲ್ಲಿಗೆ ಬರುವಾಗ ಅಜ್ಜಿ ಒಬ್ಬರೇ ಇರುತ್ತಾರೆ ನಮಗೆ ಊಟ ಕೊಡಿ ಮಗುವಿಗೆ ಹಾಲು ಕೊಡಿ ಎಂದು ಕೇಳುತ್ತಾಳೆ. ಆಗ ಮನೆಯಲ್ಲಿದ್ದ ಅಜ್ಜಿ ಏನು ಇಲ್ಲ. ನಾನು ಊಟ ಮಾಡಿ ಆಯಿತು ಎಂದು ಹೇಳಿದಾಗ, ಇಲ್ಲ ಅಜ್ಜಿ ಮನೆಯೊಳಗೆ ಹೋಗಿ ನೋಡಿ ಅಗೋಳಿಯಲ್ಲಿ ತಂಜನ, ಕುಡಪೆದ ಬೆಂಜನ, ಮಡಿಕೆಯಲ್ಲಿ ತಂಗಳನ್ನ ಪಾತ್ರೆಯಲ್ಲಿ ಮೊಸರು ಇದೆ ಎಂದು ಹೇಳುತ್ತಾಳೆ ನಿಜವಾಗಿಯೂ ಏನೂ ಇರಲಿಲ್ಲ. ಆದರೆ ಅಜ್ಜಿ ಬಂದು ನೋಡಿದಾಗ ತಂಗಳನ್ನವೂ ಇತ್ತು ಮೊಸರು ಇತ್ತು. ಅಜ್ಜಿ ಅದನ್ನು ಅವರಿಗೆ ನೀಡಿದರು.
ಅವರು ಸಂತೋಷವಾಗಿ ಊಟ ಮಾಡಿ ಇನ್ನು ಮುಂದೆ ಈ ಮನೆಯಲ್ಲಿ ಅನ್ನ ಹಾಲು ಮೊಸರು ತುಂಬಿ ತುಳು ಕಾಡಲ್ಲಿ ಎಂದು ವರವನ್ನು ಕೊಡುತ್ತಾಳೆ. ಪ್ರತಿ ವರ್ಷಕ್ಕೊಮ್ಮೆ ಕೊಡಿ ತಿಂಗಳಿನಲ್ಲಿ ಕುಮಾರನ ಹೆಸರಲ್ಲಿ ಕಂಬಳ ನಡೆಯಲಿ. ಬೆಳಿಗ್ಗೆ ಎದ್ದು ಮಗು ಕುಮಾರನ ಬಟ್ಟೆಯನ್ನು ಒಗೆಯಲು ಅಲ್ಲಿ ಹತ್ತಿರವಿದ್ದ ಗದ್ದೆಯ ದಾರು ಒಂದು ಹಳ್ಳವನು ಗೆಜ್ಜೆ ಕತ್ತಿ ( ಬಾಣಾಂತಿಯರು ಮಗುವಿಗೆ ಉಪಯೋಗಿಸುವ ಕತ್ತಿ) ಇಂದ ಹಳ್ಳವನು ತೋಡಿ ಅದರಲ್ಲಿ ಬಟ್ಟೆಯನ್ನು ಒಗೆದು ಆ ಹಳ್ಳದಲ್ಲಿ ಕಪ್ಪೆ ವಾಸ ಮಾಡಬಾರದೆಂದು ಶಾಪವನ್ನು ಕೊಡುತ್ತಾಳೆ. ಇಂದಿಗೂ ಆ ಹಳ್ಳ ದಲ್ಲಿ ಕಪ್ಪೆ ವಾಸ ಮಾಡುವುದಿಲ್ಲ. ಅಲ್ಲಿಂದ ಮುಂದೆ ಬಿಸಿಲಿಗೆ ಮಗುವನ್ನು ಹಿಡಿದುಕೊಂಡು ದಾರು ಮತ್ತು ಸಿರಿ ಪಾರ್ದನವನು ಹೇಳಿಕೊಂಡು ಬರುವಾಗ ಜವನೆರ್ ಕಟ್ಟೆಯಲ್ಲಿ ಯುವಕರ ತಂಡ ಅವಳನ್ನು ಹೂಡಿ ತಮಾಷೆ ಮಾಡುತ್ತಾರೆ. ಯಾರಪ್ಪ ಈ ಹೆಣ್ಣು ಅವಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ ಮಟಮಟ ಮಧ್ಯಾಹ್ನದ ಬಿಸಿಲಿಗೆ ಪಾರ್ದನ ಹೇಳಿಕೊಂಡು ಹೋಗುತ್ತಾಳೆ ಎಂದು ನಗುತ್ತಾರೆ. ಆಗ ಸಿರಿ ಮುಂದೆ ಬಂದು ನೀವು ನಿಮ್ಮ ನಿಮ್ಮೊಳಗೆ ಜಗಳ ಮಾಡಿಕೊಂಡು ಹೊಡೆದುಕೊಳ್ಳಿ. ಇಂದು ಶಾಪವನ್ನು ಕೊಟ್ಟು ಕಂಗಣ ಬೆಟ್ಟುವಿಗೆ ಬರುತ್ತಾಳೆ. ಆಗಲೇ ಯುವಕರು ಜಗಳ ಮಾಡಿಕೊಂಡು ಹೊಡೆದಾಡಿಕೊಳ್ಳಲು ಆರಂಭಿಸಿದರು. ಇದೆ ಕಂಗಣ ಬೆಟ್ಟುವಿಗೆ ಬಂದು ನಾವು ಮಾಡಿದ ತಪ್ಪಾಯ್ತು ಎಂದು ಕ್ಷಮೆ ಯಾಚಿಸಿದರು. ಅದಕ್ಕೆ ಸಿರಿ 10 ತಾಯಿಯ ಮಕ್ಕಳು ಒಂದೇ ತಾಯಿಯ ಮಕ್ಕಳಂತೆ ಬಾಳಿ ಎಂದು ವರವನ್ನು ಕೊಟ್ಟು ಅಲ್ಲಿಂದ ಮುಂದೆ ಹೋಗುತ್ತಾಳೆ. ಮುಂದೆ ಹೋಗುವಾಗ ಕಂಗೊಟ್ಟು ಪಾದೆಯಲ್ಲಿ ಹೆಂಗಸರು ಭತ್ತ ಹುಟ್ಟು ಕುಟ್ಟುತ್ತಿರುತ್ತಾರೆ. ಅವರು ಇವಳನ್ನು ನೋಡಿ ನಗುತ್ತಾರೆ. ಅದರಿಂದ ಸಿರಿಗೆ ಕೋಪ ಬಂದು ಭತ್ತ ಕುಟ್ಟುವ ಒನಕೆಯಿಂದ ಒಬ್ಬರ ತಲೆಗೆ ಒಬ್ಬರು ಹಾಕಿಕೊಂಡು ಹೊಡೆದಾಡಿಕೊಳ್ಳಿ ಎಂದು ಶಾಪವನ್ನು ಕೊಡುತ್ತಾಳೆ. ಸ್ವಲ್ಪ ಹೊತ್ತಿನ ನಂತರ ಮಾತಿಗೆ ಮಾತು ಬೆಳೆದು ಅವರೇ ಜಗಳ ಮಾಡಿಕೊಂಡು ಹೊಡೆದಾಡಿಕೊಳ್ಳುತ್ತಾರೆ. ತಮ್ಮ ತಪ್ಪಿನ ಅರಿವಾಗಿ ಸಿರಿಯಲ್ಲಿ ಕ್ಷಮೆ ಕೇಳುತ್ತಾರೆ. ಅಲ್ಲಿಂದ ಮುಂದೆ ಬಂದು ಬನ್ನಂಜೆ ಬೈಲಿನಲ್ಲಿ ಹೋಗುವಾಗ ನಲ್ಲೆ ( ಒಂದು ಬಳ್ಳಿ ಕಳೆ ಕಾಲಿಗೆ ಸಿಕ್ಕಿಬಿದ್ದು ಅವಳು ಬೀಳುತ್ತಾಳೆ. ಈ ಬೈಲಿನಲ್ಲಿ ಇನ್ನು ಮುಂದೆ ನೆಲೆಯಾ ಮೊಳಕೆ ಬರಬಾರದೆಂದು ಶಾಪ ಕೊಡುತ್ತಾಳೆ ಇಂದಿಗೂ ಆ ಬೈಲಿ ನಲ್ಲಿ ಬೆಳೆಯುವುದಿಲ್ಲ.
(ಈ ಕಥೆಯ ವಿವರ ನೀಡಿದವರು ಜಗದೀಶ್ ಶೆಟ್ಟಿ ಕಂಬಳ ಮನೆ ಕಂಬಲಕಟ್ಟ ಕೊಡವೂರು)