ಬೆಂಗಳೂರು : ತಾಯಿಯೊಬ್ಬಳು ತನ್ನ ಮೂರುವರೆ ವರ್ಷದ ಮಗುವನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹೆಚ್ ಎಎಲ್ ವಿಭೂತಿಪುರದಲ್ಲಿ ನಿನ್ನೆ ಘಟನೆ ನಡೆದಿದೆ. ಸಂಯುಕ್ತಾ ಮೃತ ಮಗು. ಗಾಯತ್ರಿ ಕೃತ್ಯ ಎಸಗಿ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ.
ಗಾಯತ್ರಿ ತನ್ನ ಮೂರೂವರೆ ವರ್ಷದ ಸಂಯುಕ್ತಳನ್ನು ನೀರಿನ ಟಬ್ ನಲ್ಲಿ ಮುಳುಗಿಸಿ, ಬಳಿಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
Advertisement. Scroll to continue reading.
ಈ ವೇಳೆ ಮನೆಗೆ ಪತಿ ನರೇಂದ್ರ ಬಂದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತ್ನಿ ಗಾಯತ್ರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯತ್ರಿ ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ, ಬಂದ ಕಷ್ಟಗಳನ್ನು ಎದುರಿಸಲು ಶಕ್ತಿ ಇಲ್ಲ ಎಂದು ಬರೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.