ಉಡುಪಿ : ಪಾಂಡುರಂಗ ರಮಣ ನಾಯಕ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜಿಸಿದ ಗುಂಪು ಆಟಗಳ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಿತು. ಸೀತಾನದಿ ವಿಠಲ ಶೆಟ್ಟಿ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಉಡುಪಿ ವಿದ್ಯಾಭಾರತಿ ಕರ್ನಾಟಕ
ದ ಅಧ್ಯಕ್ಷ ಪಾಂಡುರಂಗ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅಮೃತ ಭಾರತಿ ಟ್ರಸ್ಟ್
ಕಾರ್ಯದರ್ಶಿ ಗುರುದಾಸ್ ಶೆಣೈ, ಆಡಳಿತ ಮಂಡಳಿ ಅಮೃತ ಭಾರತಿ ವಿದ್ಯಾಲಯ ಹೆಬ್ರಿ
ಯ ಅಧ್ಯಕ್ಷ ಶೈಲೇಶ್ ಕಿಣಿ, ಅಮೃತ ಭಾರತಿ ಟ್ರಸ್ಟ್
ಸದಸ್ಯ ಬಾಲಕೃಷ್ಣ ಮಲ್ಯ
, ಉಡುಪಿ ವಿದ್ಯಾಭಾರತಿ ಕರ್ನಾಟಕ
ಕಾರ್ಯದರ್ಶಿ ಮಹೇಶ ಹೈಕಾಡಿ
, ವಿದ್ಯಾಭಾರತಿ ಕರ್ನಾಟಕ
ಜಿಲ್ಲಾ ಶಾರೀರಿಕ ಪ್ರಮುಖ್
ವಿಜಯ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.
ಸ್ಪರ್ಧೆಯು ಭಾಲವರ್ಗ ಮತ್ತು ಕಿಶೋರ ವರ್ಗದಲ್ಲಿ ನಡೆಯಿತು. ಸ್ಪರ್ಧೆಯಲ್ಲಿ
ರವೀಂದ್ರ ಶೆಟ್ಟಿ
ನಿರೂಪಿಸಿದರು. ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ
ಯ ದೈಹಿಕ ಶಿಕ್ಷಣ ಶಿಕ್ಷಕ
ಪ್ರಶಾಂತ್, ಅಮೃತ ಭಾರತಿ ವಿದ್ಯಾಲಯ ಹೆಬ್ರಿ
ಯ ದೈಹಿಕ ಶಿಕ್ಷಕ ನಿಶಾನ್ ವಂದಿಸಿದರು.
ಬಾಲವರ್ಗ ಕಬಡ್ಡಿ ಬಾಲಕಿಯರ ತಂಡ ಪ್ರಥಮ
, ಅಮೃತ ಭಾರತಿ ವಿದ್ಯಾಲಯ ಹೆಬ್ರಿ
ದ್ವಿತೀಯ
, ಅಮೃತ ಭಾರತಿ ವಿದ್ಯಾಕೇಂದ್ರ
ಹೆಬ್ರಿ,
ಕಿಶೋರ ವರ್ಗ ಕಬಡ್ಡಿ ಬಾಲಕಿಯರ ತಂಡ ಪ್ರಥಮ, ಅಮೃತ ಭಾರತಿ ವಿದ್ಯಾಲಯ ಹೆಬ್ರಿ, ದ್ವಿತೀಯ ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ.
ಬಾಲವರ್ಗದಲ್ಲಿ ವಾಲಿಬಾಲ್ ಹುಡುಗರ ತಂಡ ಪ್ರಥಮ ಅಮೃತ ಭಾರತಿ ವಿದ್ಯಾಲಯ ಹೆಬ್ರಿ, ದ್ವಿತೀಯ ಸರಸ್ವತಿ ವಿದ್ಯಾಲಯ ಸಿದ್ಧಾಪುರ.
ಕಿಶೋರ ವರ್ಗದಲ್ಲಿ ವಾಲಿಬಾಲ್ ಹುಡುಗರ ತಂಡ ಪ್ರಥಮ ಅಮೃತ ಭಾರತಿ ವಿದ್ಯಾಲಯ ಹೆಬ್ರಿ.ದ್ವಿತೀಯ ಅಮೃತ ಭಾರತಿ ವಿದ್ಯಾಕೇಂದ್ರ. ಬಾಲವರ್ಗದಲ್ಲಿ ಕಬಡ್ಡಿ ಹುಡುಗರ ತಂಡ ಪ್ರಥಮ ಅಮೃತ ಭಾರತಿ ವಿದ್ಯಾಕೇಂದ್ರ . ದ್ವಿತೀಯ ನಚಿಕೇತ ವಿದ್ಯಾಲಯ ಬೈಲೂರು.ಕಿಶೋರ ವರ್ಗದಲ್ಲಿ ಕಬಡ್ಡಿ ಹುಡುಗರ ತಂಡ ಪ್ರಥಮ ಅಮೃತ ಭಾರತಿ ವಿದ್ಯಾ ಕೇಂದ್ರ ಹೆಬ್ರಿ .ದ್ವಿತೀಯ ಸರಸ್ವತಿ ವಿದ್ಯಾಲಯ ಸಿದ್ಧಾಪುರ.
ಚಿದಾನಂದ ದೈಹಿಕ ಶಿಕ್ಷಣ ಶಿಕ್ಷಕರು ಸರಸ್ವತಿ ವಿದ್ಯಾಲಯ ಸಿದ್ಧಾಪುರ, ಪ್ರವೀಣ್ ಹೆಗ್ಡೆ ಮತ್ತು ನಿಶಾನ್ ದೈಹಿಕ ಶಿಕ್ಷಣ ಶಿಕ್ಷಕರು ಅಮೃತ ಭಾರತಿ ವಿದ್ಯಾಲಯ ಹೆಬ್ರಿ, ಪ್ರಶಾಂತ ಮತ್ತು ರವೀಂದ್ರ ಶೆಟ್ಟಿ ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ, ವಿಜಯ ಕುಮಾರ್ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕರು, ಪಿ ಆರ್ ಎನ್ ಅಮೃತ ಭಾರತಿ ಪದವಿಪೂರ್ವ ಕಾಲೇಜು ಹೆಬ್ರಿ, ಮಂಜಯ್ಯ ಗೌಡ, ದೈಹಿಕ ಶಿಕ್ಷಣ ಶಿಕ್ಷಕ, ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ ಇವರು ಪಂದ್ಯಾಟವನ್ನು ನಿರ್ವಹಿಸಿದರು.